546 ಭಾರತೀಯ ಖೈದಿಗಳಿಗೆ ವಿಮುಕ್ತಿ – News Mirchi

546 ಭಾರತೀಯ ಖೈದಿಗಳಿಗೆ ವಿಮುಕ್ತಿ

ನವದೆಹಲಿ: ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ 546 ಜನ ಭಾರತೀಯರಿಗೆ ಶೀಘ್ರವೇ ವಿಮುಕ್ತಿ ದೊರೆಯಲಿದೆ. ಪಾಕಿಸ್ತಾನದಲ್ಲಿ ಹಲವಾರು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ಇವರನ್ನು ಭಾರತಕ್ಕೆ ಕಳಹಿಸುತ್ತಿರುವುದಾಗಿ ಶನಿವಾರ ಪಾಕಿಸ್ತಾನ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

2008 ಮೇ 21 ರಂದು ಮಾಡಿಕೊಂಡ ಒಪ್ಪಂದದಂತೆ ತಮ್ಮ ದೇಶದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಭಾರತೀಯರನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿರುವ ಪಾಕ್ ಸರ್ಕಾರ, ಭಾರತದ ಹೈಕಮೀಷನರ್ ಗೌತಮ್ ಬಾಂಬವಾಲೇ ಅವರಿಗೆ ಖೈದಿಗಳ ಪಟ್ಟಿ ನೀಡಿದೆ.

ವಿಂಡೋಸ್ 10 ಅಪ್ಡೇಟ್: ಭಾರತೀಯರಿಗಾಗಿ ಭಾರೀ ರಿಯಾಯಿತಿಗೆ ಕೇಂದ್ರದ ಬೇಡಿಕೆ

ಬಿಡುಗಡೆಯಾಗಲಿರುವ 546 ಜನ ಭಾರತೀಯರಲ್ಲಿ 494 ಜನರು ಮೀನುಗಾರರು ಎನ್ನಲಾಗಿದೆ. ಪ್ರತಿ ವರ್ಷ ಜನರವರಿ 1, ಜುಲೈ 1 ರಂದು ಹೀಗೆ ಎರಡು ಬಾರಿ ಪರಸ್ಪರ ಖೈದಿಗಳನ್ನು ಅವರವರ ದೇಶಗಳಿಗೆ ಕಳುಹಿಸಲು ಖೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಭಾರತ ಬಿಡುಗಡೆ ಮಾಡಲಿರುವ ತಮ್ಮ ದೇಶದ ಖೈದಿಗಳ ಪಟ್ಟಿಗಾಗಿ ಕಾಯುತ್ತಿರುವುದಾಗಿ ದೆಹಲಿಯಲ್ಲಿನ ಪಾಕ್ ಹೈಕಮೀಷನರ್ ಹೇಳಿದ್ದಾರೆ.

Loading...