ಪಾಕ್ ಸರ್ಕಾರಿ ವೆಬ್ಸೈಟ್ ಹ್ಯಾಕ್, ಭಾರತದ ರಾಷ್ಟ್ರಗೀತೆ – News Mirchi

ಪಾಕ್ ಸರ್ಕಾರಿ ವೆಬ್ಸೈಟ್ ಹ್ಯಾಕ್, ಭಾರತದ ರಾಷ್ಟ್ರಗೀತೆ

ಅಪರಿಚಿತ ಹ್ಯಾಕರ್ ಗಳು ಪಾಕಿಸ್ತಾನ ಸರ್ಕಾರಿ ವೆಬ್ಸೈಟ್ ಹ್ಯಾಕ್ ಮಾಡಿದ್ದು ಭಾರತದ ರಾಷ್ಟ್ರಗೀತೆಯನ್ನ ಪೋಸ್ಟ್ ಮಾಡಿರುವ ಘಟನೆ ಗುರುವಾರ ನಡೆದಿದೆ. ರಾಷ್ಟ್ರಗೀತೆ ಜೊತೆಗೆ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಪಾಕ್ ಸರ್ಕಾರಿ ವೆಬ್ಸೈಟ್ ನಲ್ಲಿ ಹ್ಯಾಕರ್ ಗಳು ಹಾಕಿದ್ದಾರೆ. ವೆಬ್ಸೈಟ್ ತೆರೆದವರಿಗೆ ಭಾರತದ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳ ಚಿತ್ರದೊಂದಿಗೆ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಕೇಳಿಬಂದಿದೆ. ಇದನ್ನು ಗಮನಿಸಿದವರೊಬ್ಬರು ವೆಬ್ಸೈಟ್ ನ ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಆ ವೆಬ್ಸೈಟ್ ಯಥಾಸ್ಥಿತಿಗೆ ಮರಳಿದೆ.

ಭಾರತ ಇತರೆ ದೇಶಗಳಂತಲ್ಲ, ಕೆಣಕಿದರೆ ನಮಗೇ ನಷ್ಟ: ಚೀನಾ ತಜ್ಞರು

ಭಾರತದ ಪ್ರಸಿದ್ದ ನಾಲ್ಕು ಸಂಸ್ಥೆಗಳ ವೆಬ್ಸೈಟ್ ಗಳನ್ನು ಪಾಕ್ ಹ್ಯಾಕರ್ ಗಳು ಹ್ಯಾಕ್ ಮಾಡಿದ ನಾಲ್ಕು ತಿಂಗಳ ನಂತರ ಈ ಘಟನೆ ನಡೆದಿದೆ.

Contact for any Electrical Works across Bengaluru

Loading...
error: Content is protected !!