ಪಾಕಿಸ್ತಾನದ ಬಾಬರ್-3 ಕ್ಷಿಪಣಿ ಪರೀಕ್ಷೆ ಕಂಪ್ಯೂಟರ್ ಸೃಷ್ಟಿ?

ಬಾಬರ್-3 ಹೆಸರಿನ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಭೀಗುತ್ತಿರುವ ಪಾಕಿಸ್ತಾನದ ಮಾತಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಪಾಕಿಸ್ತಾನದ ಕ್ಷಿಪಣಿ ಪ್ರಯೋಗ ಬರೀ ಬೊಗಳೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪಠಾಣ್ ಕೋಟ್ ನಲ್ಲಿನ ಉಪಗ್ರಹ ಚಿತ್ರಣ ವಿಶ್ಲೇಷಕರೂ ಸೇರಿದಂತೆ ತಜ್ಞರು ಪಾಕಿಸ್ತಾನದ ಬಾಬರ್ -3 ಪರೀಕ್ಷೆ ನಕಲಿ ಎಂದು ತಾಂತ್ರಿಕ ಪುರಾವೆ ಸಹಿತ ಹೇಳುತ್ತಿದ್ದಾರೆ. ಕ್ಷಿಪಣಿ ಉಡಾವಣೆ ವೀಡಿಯೋವನ್ನು ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಕ್ಷಿಪಣಿ ಪರೀಕ್ಷೆಯಂತೆ ಬಿಂಬಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ಇಮೇಜರಿ ತಜ್ಞ ಕರ್ನಲ್(ನಿವೃತ್ತ) ವಿನಾಯಕ್ ಭಟ್ ಹೇಳುವಂತೆ ಪಾಕ್ ಸೇನೆಯಿಂದ ಬಿಡುಗಡೆಯಾದ ವೀಡಿಯೋ ಕಂಪ್ಯೂಟರ್ ಗ್ರಾಫಿಕ್ಸ್ ನಂತಿದೆ. ಕ್ಷಿಪಣಿಯ ವೇಗವೂ ನಂಬಲಾರದಷ್ಟು ವೇಗವಿದೆ ಮತ್ತು ಕ್ಷಿಪಣಿಯ ಬಣ್ಣ ಉಡಾವಣೆಯಾದ ನಂತರ ಬಿಳಿಯಿಂದ ಕೇಸರಿ ಬಣ್ಣಕ್ಕೆ ತಿರುಗಿತ್ತು ಎಂದು ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!