ಭಾರತೀಯ ಯೋಧರ ದಾಳಿಗೆ ತತ್ತರಿಸಿ ರಾಜಿಗೆ ಮುಂದಾದ ಪಾಕ್ – News Mirchi

ಭಾರತೀಯ ಯೋಧರ ದಾಳಿಗೆ ತತ್ತರಿಸಿ ರಾಜಿಗೆ ಮುಂದಾದ ಪಾಕ್

ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಪದೇ ಪದೇ ಭಾರತದ ಮೇಲೆ ದಾಳಿ ನಡೆಸುತ್ತಿರುವ ನರಿ ಬುದ್ದಿಯ ಪಾಕಿಸ್ತಾನ, ಭಾರತೀಯ ಯೋಧರು ನೀಡುತ್ತಿರುವ ಉತ್ತರಕ್ಕೆ ತತ್ತರಿಸಿದೆ. ಭಾರತೀಯ ಯೋಧರು ನಡೆಸಿದ ಶೆಲ್ಲಿಂಗ್ ದಾಳಿಗೆ 11 ಪಾಕ್ ನಾಗರಿಕರು ಮತ್ತು ಮೂವರು ಸೈನಿಕರು ಸಾವನ್ನಪ್ಪಿದ್ದಾರೆ.

ಅಷ್ಟೇ ಅಲ್ಲದೆ, ಬುಧವಾರ ಸಂಜೆ ಪಾಕ್ ಮನವಿಯ ಹಿನ್ನೆಲೆಯಲ್ಲಿ ಮಿಲಿಟರಿ ಆಪರೇಷನ್ಸ್ ಡೈರೆಕ್ಟರ್ ಜನರಲ್ ಗಳು ಹಾಟ್ಲೈನ್ ಮೂಲಕ ಚರ್ಚಿಸಿ, ಕದನ ವಿರಾಮ ಪಾಲಿಸಲು ನಿರ್ಧರಿಸಿದರು.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ‘ಹೇಡಿಗಳ’ ದಾಳಿಗಳಿಗೆ ಭಾರತ ಸೂಕ್ತವಾದ ಉತ್ತರ ನೀಡುತ್ತಿದೆ. ಹೀಗಾಗಿ ಹೆದರಿರುವ ಪಾಕಿಸ್ತಾನ, ದಾಳಿಗಳನ್ನು ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿದೆ ಎಂದರು.

Indian armyನಮ್ಮ ಸೇನೆ ಶಕ್ತಿಯುತವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಮೊದಲ ಬಾರಿ ದೇಶದ ನಾಯಕರು ಕೂಡಾ ಬಲವಾದ ನೀತಿ ಅನುಸರಿಸುತ್ತಿದ್ದಾರೆ ಎಂದರು. ಹೇಡಿಗಳ ದಾಳಿಗೆ ಪ್ರಬಲ ಪ್ರತಿದಾಳಿ ನಡೆಸುತ್ತಿದ್ದೇವೆ, ಹೀಗಾಗಿ ಅವರು ಕೆಳಗಿಳಿದು ಬಂದು ದಾಳಿ ನಿಲ್ಲಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ದಾಳಿ ನಿಲ್ಲಿಸಲು ನಮಗೇನು ಸಮಸ್ಯೆಯಿಲ್ಲ, ಅದರೆ ನೀವೂ ಕೂಡಾ ನಿಲ್ಲಿಸಬೇಕು, ಅಗಲೇ ಯಾವುದೇ ದಾಳಿ ಇರುವುದಿಲ್ಲ ಎಂದು ಪರಿಕ್ಕರ್ ಹೇಳಿದರು.

Loading...

Leave a Reply

Your email address will not be published.