ಭಾರತೀಯ ಯೋಧ ಬಾಬೂಲಾಲ್ ರವರನ್ನು ಬಿಡುಗಡೆ ಮಾಡಿದ ಪಾಕ್ |News Mirchi

ಭಾರತೀಯ ಯೋಧ ಬಾಬೂಲಾಲ್ ರವರನ್ನು ಬಿಡುಗಡೆ ಮಾಡಿದ ಪಾಕ್

ನವದೆಹಲಿ: ಕಳೆದ ವರ್ಷ ಆಕಸ್ಮಿಕವಾಗಿ ನಿಯಂತ್ರಣ ರೇಖೆ ದಾಟಿ ಪಾಕ್ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಭಾರತೀಯ ಯೋಧ ಚಂದು ಬಾಬೂಲಾಲ್ ಚವಾಣ್ ರವರನ್ನು ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಪಂಜಾಬಿನ ವಾಘಾ ಗಡಿಯಿಂದ ಮಧ್ಯಾಹ್ನ 2:30 ರ ಸುಮಾರಿಗೆ ಚವಾಣ್ ಭಾರತಕ್ಕೆ ವಾಪಸಾಗಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ.

37 ರಾಷ್ಟ್ರೀಯ ರೈಫಲ್ಸ್ ನ 22 ವರ್ಷದ ಚವ್ಹಾಣ್, ಮಹಾರಾಷ್ಟ್ರದ ನಿವಾಸಿ. ಶನಿವಾರ ಅವರ ಬಿಡುಗಡೆಯಾಗಿದ್ದು, ಆತನ ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಮಾರನೆಯ ದಿನವೇ ಭಾರತೀಯ ಯೋಧ ಆಕಸ್ಮಿಕವಾಗಿ ಗಡಿ ದಾಟಿ ಪಾಕ್ ಸೇರಿದ್ದ. ಚವಾಣ್ ಮೇಲಿನ ವಿಚಾರಣೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಹಿಂದಿರುಗಿಸುತ್ತೇವೆ ಎಂದು ಇತ್ತೀಚೆಗೆ ಪಾಕ್ ಭರವಸೆ ನೀಡಿತ್ತು.

ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರೆಸುವ ಭಾಗವಾಗಿಯೇ ಚವ್ಹಾಣ್ ರವರನ್ನು ಬಿಡುಗಡೆ ಮಾಡುತ್ತಿರುವುದಾಗಿ ಪಾಕಿಸ್ತಾನ ಪ್ರಕಟಿಸಿದೆ. ಚವ್ಹಾಣ್ ಪಾಕ್ ಸೇನೆಯ ಬಂಧನದಲ್ಲಿದ್ದಾನೆ ಎಂದು ತಿಳಿಯುತ್ತಿದ್ದಂತೆ ಅತನ ಅಜ್ಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

The Pakistan military on Saturday handed over Indian Sepoy Chandu Babulal Chavan, who inadvertently crossed the Line of Control (LoC) on 29 September, 2016.

Loading...
loading...
error: Content is protected !!