ಚಾಂಪಿಯನ್ಸ್ ಟ್ರೋಫಿ ಫೈನಲ್: ಭಾರತದ ಮುಂದೆ ಬೃಹತ್ ಗುರಿ – News Mirchi

ಚಾಂಪಿಯನ್ಸ್ ಟ್ರೋಫಿ ಫೈನಲ್: ಭಾರತದ ಮುಂದೆ ಬೃಹತ್ ಗುರಿ

ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ 339 ರನ್ ಗಳ ಭಾರಿ ಮೊತ್ತದ ಗುರಿಯನ್ನು ನೀಡಿದೆ. ಪಾಕಿಸ್ತಾನದ ಫಕಾರ್ ಜಮಾನ್(114; 106 ಎಸೆತಗಳಲ್ಲಿ 12 ಫೋರ್, 3 ಸಿಕ್ಸರ್), ಅಜಹರ್ ಅಲೀ(59; 71 ಎಸೆತಗಳಲ್ಲಿ 4 ಫೋರ್), ಬಾಬರ್ ಅಜಮ್(46; 52 ಎಸೆತಗಳಲ್ಲಿ 4 ಫೋರ್), ಮೊಹಮದ್ ಹಫೀಜ್(57 ನಾಟೌಟ್; 37 ಎಸೆತೆಗಳಲ್ಲಿ 4 ಫೋರ್, 3 ಸಿಕ್ಸರ್ಸ್) ಉತ್ತಮ ಪ್ರದರ್ಶನದ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಸಹಕಾರಿಯಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನಕ್ಕೆ ಆರಂಭಿಕ ಆಟಗಾರರಾದ ಜಮಾನ್, ಅಜಹರ್ ಅಲೀ ಉತ್ತಮ ಆರಂಭವನ್ನೇ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ 128 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಮೊದಲು ಅಜಹರ್ ಅಲೀ ಅರ್ಧ ಶತಕ ಗಳಿಸಿದರೆ, ನಂತರ ಜಮಾನ್ ಅರ್ಧ ಶತಕ ಗಳಿಸಿದರೆ. ನಂತರ ಇಬ್ಬರೂ ಆಕ್ರಮಣಕಾರಿ ಆಟದ ಸೂಚನೆ ನೀಡಿದರಾದರೂ ಈ ವೇಳೆ ಅಲೀ ಔಟ್ ಆದರು. ನಂತರ ಜಮಾನ್ ಜೊತೆ ಸೇರಿದ ಫಸ್ಟ್ ಡೌನ್ ಆಟಗಾರ ಬಾಬರ್ ಅಜಮ್ ಸಂದರ್ಭೋಚಿತ ಆಟದಿಂದ ಈ ಬಾಬರ್-ಜಮಾನ್ ಜೋಡಿ 72 ರನ್ ಗಳಿಸಿದರು. 33.1 ಓವರ್ ಗಳಲ್ಲಿ ಪಾಕ್ ಮೊತ್ತ 200 ರನ್ ಗಳಾಗಿತ್ತು.

ನಂತರ ಪಾಕಿಸ್ತಾನದ ಹಿರಿಯ ಆಟಗಾರ ಶೋಯೆಬ್ ಮಲಿಕ್(12) ನಿರಾಸೆಗೊಳಿಸಿದರು. ಅರ್ಧ ಶತಕ ಹೊಸ್ತಿಲಿನಲ್ಲಿದ್ದ ಬಾಬರ್ ಅಜಮ್ ನಾಲ್ಕನೇ ವಿಕೆಟ್ ಆಗಿ ಹೊರ ನಡೆದರು. ಆ ನಂತರ ಮೊಹಮದ್ ಹಫೀಜ್ ಕೂಡಾ ಆಕ್ರಮಣಕಾರಿ ಆಟಕ್ಕಿಳಿದಿದ್ದರಿಂದ ಪಾಕಿಸ್ತಾನದ ಮೊತ್ತ ಸುಲಭವಾಗಿ 300 ರ ಗಡಿ ದಾಟಿತು. ನಿಗದಿತ 50 ಓವರ್ ಗಳಲ್ಲಿ 338 ಬೃಹತ್ ಮೊತ್ತದ ಸವಾಲನ್ನು ಭಾರತಕ್ಕೆ ನೀಡಿದೆ.

Loading...