ಅತ್ಯಾಚಾರಕ್ಕೆ ಅತ್ಯಾಚಾರವೇ ಶಿಕ್ಷೆ : ಇದು ಪಾಕಿಸ್ತಾನದ ಗ್ರಾಮವೊಂದರ ತೀರ್ಪು!

ಪಂಜಾಬ್(ಪಾಕಿಸ್ತಾನ): ವಿಕೃತಗಳಿಗೆ ತವರು ಮನೆಯಾಗಿರುವ ಪಾಕಿಸ್ತಾನದಲ್ಲಿ ಒಂದು ಗ್ರಾಮದ ಹಿರಿಯರು ಅಮಾನವೀಯ ತೀರ್ಪು ನೀಡಿ ಸುದ್ದಿಯಾಗಿದ್ದಾರೆ. ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿದ ವ್ಯಕ್ತಿಯ ಸಹೋದರಿ ಮೇಲೆ ಕುಟುಂಬ ಸದಸ್ಯರ ಎದುರೇ ಅತ್ಯಾಚಾರ ನಡೆಸುವಂತೆ ಪಂಚಾಯ್ತಿ ಹಿರಿಯರು ತೀರ್ಪು ನೀಡಿದ ಘಟನೆ ಪಾಕಿಸ್ತಾನದ ಪಂಜಾಬ್ ನ ಮುಲ್ತಾನ್ ವಲಯದ ರಾಜ್ ಪುರ್ ದಲ್ಲಿ ಜುಲೈ 18 ರಂದು ನಡೆದಿದ್ದು ಬೆಳಕಿಗೆ ಬಂದಿದೆ.

ಹುಡುಗಿಯ ಮೇಲೆ ಅತ್ಯಾಚಾರ ನಡೆದ ಮನೆಯನ್ನು ತೋರಿಸುತ್ತಿರುವ ಸ್ಥಳೀಯ

ಗ್ರಾಮದ ಅಷ್ಫಾಖ್ ಎಂಬ ಯುವಕ ಜುಲೈ 16 ರಂದು ಪಂಚಾಯ್ತಿ ಹಿರಿಯರ ಮೊರೆ ಹೋಗಿದ್ದ. ತನ್ನ ಸಹೋದರಿಯ ಮೇಲೆ ಅದೇ ಗ್ರಾಮದ ಉಮರ್ ವಾಡ್ಡಾ ಎಂಬಾತ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ನೀಡಿದ್ದ. ವಿಚಾರಣೆ ನಡೆಸಿದ ಗ್ರಾಮದ ಹಿರಿಯರು ವಾಡ್ಡಾ ಸಹೋದರಿ(16)ಯನ್ನು ಎಲ್ಲರೂ ನೋಡುತ್ತಿರುವಂತೆ ಅಷ್ಫಾಖ್ ಅತ್ಯಾಚಾರ ಮಾಡಬೇಕು, ಈ ಘಟನೆಯನ್ನು ಆಕೆಯ ತಂದೆ ತಾಯಿಗಳೂ ನೋಡಬೇಕೆಂಬ ಅಮಾನವೀಯ ತೀರ್ಪು ನೀಡಿದ್ದರು. ಪಂಚಾಯ್ತಿ ಹಿರಿಯರ ತೀರ್ಪನ್ನು ವಾಡ್ಡಾ ಕುಟುಂಬ ಸದಸ್ಯರು ವಿರೋಧಿಸಿದ್ದರು. ಆದರೆ ನ್ಯಾಯ ಎಲ್ಲರಿಗೂ ಒಂದೇ ಎಂದ ಗ್ರಾಮದ ಹಿರಿಯರು ಸಂತ್ರಸ್ತ ಕುಟುಂಬಕ್ಕೆ ಹೀಗೆ ನಡೆದಿದ್ದರೂ ಇದೇ ರೀತಿಯ ತೀರ್ಪು ನೀಡುತ್ತಿದ್ದೆವು ಎಂದು ತಮ್ಮ ತೀರ್ಪನ್ನು ಸಮರ್ಥಿಸಿಕೊಂಡು ಶಿಕ್ಷೆಯನ್ನು ಜಾರಿ ಮಾಡಿದ್ದಾರೆ.

ಆಗ ಭಾರತದ ಮೇಲೆ ಅಣುಬಾಂಬ್ ದಾಳಿಗೆ ಪಾಕ್ ಹೆದರಿದ್ದೇಕೆ?

ಸೋಮವಾರದವರೆಗೂ ಸಂತ್ರಸ್ತ ಕುಟುಂಬ ಪೊಲೀಸರಿಗೆ ದೂರು ನೀಡಿರಲಿಲ್ಲ. ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ಯುವತಿಯ ಮೇಲೆ ಎಲ್ಲರೆದರು ರೇಪ್ ಮಾಡಿದ ಅಷ್ಫಾಕ್ ಸೇರಿದಂತೆ 30 ಜನ ಗ್ರಾಮದ ಹಿರಿಯರ ಮೇಲೆ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ. ವಾದಾ ಸಹೋದರಿ ಎಲ್ಲರೆದುರು ಅತ್ಯಾಚಾರಕ್ಕೊಳಗಾದಳಾ ಇಲ್ಲವೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನನ್ನ ಮಗನ ಜನಪ್ರಿಯತೆ ನೋಡಿ ನಿತೀಶ್ ಗೆ ಅಸೂಯೆ: ಲಾಲೂ