ಗಂಗೂಲಿ ಕಾರನ್ನು ಅಡ್ಡಗಟ್ಟಿ ದುರ್ವರ್ತನೆ ತೋರಿದ ಪಾಕಿಗಳು – News Mirchi

ಗಂಗೂಲಿ ಕಾರನ್ನು ಅಡ್ಡಗಟ್ಟಿ ದುರ್ವರ್ತನೆ ತೋರಿದ ಪಾಕಿಗಳು

ಚಾಂಪಿಯನ್ಸ್ ಟ್ರೋಫಿ ಯ ಫೈನಲ್ ಗೂ ಮುನ್ನವೇ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಅತಿರೇಕದ ವರ್ತನೆ ಪ್ರದರ್ಶಿಸಿದ್ದಾರೆ. ಲೀಗ್ ಪಂದ್ಯದಲ್ಲಿ 124 ರನ್ ಗಳ ಅಂತರದಿಂದ ಭಾರತದಿಂದ ಮಣ್ಣು ಮುಕ್ಕಿದ್ದ ಪಾಕಿಸ್ತಾನ, ನಂತರ ಫೈನಲ್ ಗೆ ಸ್ಥಾನ ಗಳಿಸಿದೆ. ಹೀಗಾಗಿ ಅತ್ಯುತ್ಸಾಹ ಪ್ರದರ್ಶಿಸಿದ ಪಾಕ್ ಅಭಿಮಾನಿಗಳು ಭಾರತದ ಮಾಜಿ ಆಟಗಾರ, ಚಾಂಪಿಯನ್ಸ್ ಟ್ರೋಫಿ ವೀಕ್ಷಕ ವಿವರಣೆಗಾರ ಸೌರವ್ ಗಂಗೂಲಿ ವಿಷಯದಲ್ಲಿ ದುರ್ವರ್ತನೆ ತೋರಿದ್ದಾರೆ.

ಕಾರ್ಡಿಫ್ನಲ್ಲಿ ಸೈಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಬಳಿಕ ಪಾಕ್ ಅಭಿಮಾನಿಗಳು ಅತಿರೇಕವಾಗಿ ವರ್ತಿಸಿದ್ದು, ಗಂಗೂಲಿ ಕಾರನ್ನು ಅಡ್ಡಗಟ್ಟಿದ್ದಾರೆ. ಗಂಗೂಲಿ ಕಾರಿನ ಮೇಲೆ ಪಾಕ್ ದ್ವಜವನ್ನು ಇಟ್ಟು, ಕಾರಿನ ಮೇಲೇರಲು ಪ್ರಯತ್ನಿಸುತ್ತಾ ಪಾಕಿಸ್ತಾನ ಜಿಂದಾಬಾದ್, ಇಂಡಿಯಾ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಪಾಕಿಗಳು ಕಾರನ್ನು ಎಲ್ಲಾ ಕಡೆಯಿಂದ ಸುತ್ತುವರೆದು ಎಷ್ಟೇ ದುರ್ವರ್ತನೆಯಿಂದ ನಡೆದುಕೊಂಡರೂ ಸ್ವಲ್ಪವೂ ಎದೆಗುಂದದ ಗಂಗೂಲಿ ಮುಗುಳ್ನಗೆ ಪ್ರದರ್ಶಿಸಿದರು. ಬಾಂಗ್ಲಾ ವಿರುದ್ಧ ಸೆಮಿಫೈನಲ್ ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿರುವ ಭಾರತ, ಭಾನುವಾರ ತನ್ನ ಎದುರಾಳಿ ಪಾಕಿಸ್ಥಾನದ ವಿರುದ್ಧ ಸೆಣಸಲಿದೆ.

Loading...