ಪಾಕ್ ಪತ್ನಿಗೆ ಇಲ್ಲಿ ವಾಸಿಸಲು ಅನುಮತಿ ಇಲ್ಲ!

ಪಾಕಿಸ್ತಾನ ಭಾರತದ ನಡುವೆ ಉದ್ರಿಕ್ತ ಪರಿಸ್ಥಿತಿಗಳು ನೆಲೆಸಿರುವ ಹಿನ್ನೆಲೆಯಲ್ಲಿ ಭಾರತೀಯ ಮುಸ್ಲಿಮನ ಪಾಕ್ ಪತ್ನಿಗೆ ಗುಜರಾತಿನ ಕಛ್ ಜಿಲ್ಲೆಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ.

ಭಾರತಕ್ಕೆ ಬರುವ ಮೊದಲೇ ಕಛ್ ಜಿಲ್ಲೆ ಹೊರತುಪಡಿಸಿ ಬೇರೆ ಸ್ಥಳವನ್ನು ಉಳಿದುಕೊಳ್ಳಲು ಅಯ್ಕೆ ಮಾಡಿಕೊಳ್ಳಬಹುದು ಎಂಬ ಷರತ್ತಿನ ಮೇಲೆ ಪಾಕ್ ಪತ್ನಿ ಮತ್ತು ಆಕೆಯ ಕುಟುಂಬಕ್ಕೆ ವೀಸಾ ನೀಡಲಾಗಿತ್ತು. ಕಛ್ ಜಿಲ್ಲೆಯಲ್ಲಿ ಭಾರತೀಯ ಮುಸ್ಲಿಂ ಪತಿ ಅತ್ಲಾಬ್ ಪಹ್ಲೇಜಾ ಮನೆಯಿದೆ.

ಆದರೆ ಪಾಕ್ ಕುಟುಂಬ ಮೊರ್ಬಿಯಲ್ಲಿ ಬಾಡಿಗೆ ಮನೆ ಪಡೆಯಲು ಪ್ರಯತ್ನಿಸಿದಾಗ ಪಾಕ್ ನಾಗರಿಕರೆಂಬ ಕಾರಣಕ್ಕೆ ಮನೆ ಬಾಡಿಗೆಗೆ ನೀಡಲು ಯಾರೂ ಮುಂದಾಗಿಲ್ಲ. ಕೊನೆಗೆ ಆ ಕುಟುಂಬ ಹೋಟೆಲಿನಲ್ಲಿ ಉಳಿದುಕೊಂಡಿತು. ಅಧಿಕಾರಿಗಳು ವಿನಾಕಾರಣ ನನ್ನ ಪತ್ನಿ ಮತ್ತು ಅವರ ಕುಟುಂಬದವರಿಗೆ ಕಛ್ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಪಹ್ಲೇಜಾ ಆರೋಪ.

ಅತ್ಲಾಬ್ ಪಹ್ಲೇಜಾ ಎಂಬಾತನ ಮನೆ ಗುಜರಾತಿನ ಕಛ್ ಜಿಲ್ಲೆಯ ಭುಜ್ ಎಂಬಲ್ಲಿದೆ. ಆತ ಪಾಕಿಸ್ತಾನದ ಮಹಿಳೆ ಸಿದ್ರಾಳನ್ನು ಎಂಟು ತಿಂಗಳ ಹಿಂದೆ ಮದುವೆಯಾಗಿದ್ದ. ಸಿದ್ರಾ ತನ್ನ ಕುಟುಂಬ ಸದಸ್ಯರೊಂದಿಗೆ ಭಾರತಕ್ಕೆ ಭೇಡಿ ನೀಡುವಾಗಲೇ ಗಡಿ ಜಿಲ್ಲೆಯಾದ ಕಛ್ ಗೆ ಭೇಟಿ ನೀಡಬಾರದೆಂದು ಸೂಚಿಸಲಾಗಿದೆ.

Related News

Loading...

Leave a Reply

Your email address will not be published.

error: Content is protected !!