ಕುತೂಹಲ ಮೂಡಿಸಿದ ಪಳನಿಸ್ವಾಮಿ, ಮೋದಿ ಭೇಟಿ – News Mirchi
We are updating the website...

ಕುತೂಹಲ ಮೂಡಿಸಿದ ಪಳನಿಸ್ವಾಮಿ, ಮೋದಿ ಭೇಟಿ

ಅಣ್ಣಾಡಿಎಂಕೆ ಪಕ್ಷದ ಎರಡು ಬಣಗಳು ವಿಲೀನ ಬಹುತೇಕ ಯಶಸ್ವಿಯಾಗಿರುವ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸಂಸತ್ ಭವನದ ಪ್ರಧಾನಿ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಆದರೆ ಪ್ರಧಾನಿ ಮೋದಿಯವರೊಂದಿಗಿನ ಭೇಟಿಯಲ್ಲಿ ಅಖಿಲ ಭಾರತ ವೈದ್ಯಕೀಯ ಕಾಲೇಜು ಪ್ರವೇಶ ಪರೀಕ್ಷೆ “ನೀಟ್” ನಿಂದ ವಿನಾಯಿತಿ ನೀಡಬೇಕೆಂಬ ರಾಜ್ಯದ ಬೇಡಿಕೆ ಕುರಿತು ಮಾತ್ರ ಪ್ರಧಾನಿಯೊಂದಿಗೆ ಚರ್ಚಿಸಿದ್ದಾಗಿ ಪಳನಿಸ್ವಾಮಿ ಹೇಳಿದ್ದಾರೆ.

ಅಣ್ಣಾಡಿಎಂ ಉಪಪ್ರಧಾನಕಾರ್ಯದರ್ಶಿ ಹುದ್ದೆಗೆ ದಿನಕರನ್ ನೇಮಕ ನಿಯಮ ಬಾಹಿರ ಎಂದು ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆ ಪಕ್ಷ ನಿರ್ಣಯ ತೆಗೆದುಕೊಂಡ ಬಳಿಕ ಎರಡೂ ಬಣಗಳ ವಿಲೀನ ಪ್ರಕ್ರಿಯೆಯು ಮತ್ತೆ ಚುರುಕುಗೊಂಡಿದೆ. ಮತ್ತೊಂದು ಬಣದ ನಾಯಕ ಪನ್ನೀರ್ ಸೆಲ್ವಂ ಮೊದಲಿನಿಂದಲೂ ದಿನಕರನ್ ಮತ್ತು ಶಶಿಕಲಾ ಗುಂಪನ್ನು ಪಕ್ಷದಿಂದ ದೂರವಿಟ್ಟರೆ ಮಾತ್ರ ಬಣಗಳ ವಿಲೀನ ಸಾಧ್ಯ ಎಂಬ ಷರತ್ತಿ ವಿಧಿಸುತ್ತಿದ್ದುದು ತಿಳಿದದ್ದೇ.

ವೆಂಕಯ್ಯನಾಯ್ಡು ಅವರ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ಅಣ್ಣಾಡಿಎಂಕೆ ಪಕ್ಷದ ಎರಡೂ ಬಣಗಳ ನಾಯಕರು ಹಾಜರಿದ್ದರು. ದೆಹಲಿಯಲ್ಲೇ ಇರುವ ಪನ್ನೀರ್ ಸೆಲ್ವಂ, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

Contact for any Electrical Works across Bengaluru

Loading...
error: Content is protected !!