18ಕ್ಕೆ ಪಳನಿಸ್ವಾಮಿ ಬಲಪರೀಕ್ಷೆ |News Mirchi

18ಕ್ಕೆ ಪಳನಿಸ್ವಾಮಿ ಬಲಪರೀಕ್ಷೆ

ಚೆನ್ನೈ: ತಮಿಳುನಾಡಿನಲ್ಲಿ ಕೆಲ ದಿನಗಳಿಂದ ನೆಲೆಸಿರುವ ಅನಿಶ್ಚಿತತೆಗೆ ತೆರೆ ಬಿದ್ದಿದೆ. ಅಣ್ಣಾಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಪಳನಿಸ್ವಾಮಿ ತಮಿಳುನಾಡಿನ 29ನೇ ಮುಖ್ಯಮಂತ್ರಿಯಾಗಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕಾರ ಮಾಡಿದರು. ವಿಧಾನಸಭೆಯಲ್ಲಿ ಪಳನಿಸ್ವಾಮಿ ಬಹುಮತ ಸಾಬೀತಿಗೆ ರಾಜ್ಯಪಾಲರು 15 ದಿನಗಳ ಗಡುವು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳು 18 ರಂದು ವಿಧಾನಸಭೆಯಲ್ಲಿ ಬಲಪರೀಕ್ಷೆ ನಡೆಸಲು ಸಿದ್ಧತೆ ಮಾಡಿರುವುದಾಗಿ ತಮಿಳುನಾಡು ವಿಧಾಸಭಾ ಕಾರ್ಯದರ್ಶಿ ಜಮಾಲುದ್ದೀನ್ ಪ್ರಕಟಿಸಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ವಿಧಾನಸಭಾ ಅಧಿವೇಶನ ನಡೆಸುವುದಾಗಿ ಹೇಳಿದ್ದಾರೆ. ಬಹುಮತ ಸಾಬೀತಿಗೆ ಕಸರತ್ತು ನಡೆಸಿರುವ ಪಳನಿಸ್ವಾಮಿ (ಶಶಿಕಲಾ) ಗುಂಪಿನ ಶಾಸಕರೆಲ್ಲಾ ರಾಜಭವನದಲ್ಲಿ ಸಿಎಂ, ಸಚಿವರ ಪ್ರಮಾಣ ವಚನ ಸ್ವೀಕಾರದ ನಂತರ ಪುನಃ ಕೂವತ್ತೂರಿನ ಗೋಲ್ಡನ್ ಬೇ ರೆಸಾರ್ಟ್ ಗೆ ಹೊರಟಿದ್ದಾರೆ.

Loading...
loading...
error: Content is protected !!