ಕೆನಡಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಸಿಖ್ ಮಹಿಳೆ |News Mirchi

ಕೆನಡಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಸಿಖ್ ಮಹಿಳೆ

ಭಾರತೀಯ ಮೂಲದ ಸಿಖ್ ಮಹಿಳೆ ಪಲ್ಬಿಂದರ್ ಕೌರ್ ಶೆರ್ಗಿಲ್ ಕೆನಡಾದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ತಲೆಗೆ ಸಿಖ್ ಟರ್ಬನ್ (ಸಿಖ್ಖರ ಸಾಂಪ್ರದಾಯಿಕ ರುಮಾಲು) ಧರಿಸಿದ ಮಹಿಳೆಯೊಬ್ಬರು ಆ ದೇಶದಲ್ಲಿ ಇಂತಹ ಮಹತ್ವದ ಹುದ್ದೆಗೆ ಆಯ್ಕೆಯಾಗಿರುವುದು ಇದೇ ಮೊದಲು. ಕೆನಡಾ ಫೆಡರಲ್ ಕ್ಯಾಬಿನೆಟ್ ಈ ಕುರಿತು ಶುಕ್ರವಾರ ಒಂದು ಪ್ರಕಟಣೆಯನ್ನು ನೀಡಿದೆ. ಬ್ರಿಟೀಷ್ ಕೊಲಂಬಿಯಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಜಸ್ಟೀಸ್ ಪಲ್ಬಿಂದರ್ ನೇಮಕವು ಕೂಡಲೇ ಜಾರಿಗೆ ಬರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪಂಜಾಬ್ ನಲ್ಲಿ ಜನಿಸಿದ ಪಲ್ಬಿಂದರ್, ನಾಲ್ಕು ವರ್ಷದವರಿದ್ದಾಗಲೇ ಕುಟುಂಬದೊಂದಿಗೆ ಕೆನಡಾದಲ್ಲಿ ನೆಲೆಸಿದರು.  ಕಾನೂನು ವ್ಯಾಸಂಗದಲ್ಲಿ ಪದವಿ ಪಡೆದಿದ್ದ ಅವರು, ನಂತರ ಸ್ಥಳೀಯ ಸಿಖ್ಖರ ಹಕ್ಕುಗಳಿಗಾಗಿ ಕೆಲಸ ಮಾಡಿದರು. ಶಾಲಾ ಕಾಲೇಜುಗಳಿಗೆ ಹೋಗುವ ಸಿಖ್ ವಿದ್ಯಾರ್ಥಿಗಳು ತಮ್ಮ ಸಾಂಪ್ರದಾಯಿಯ ಆಯುಧವಾದ ಕಿರ್ಪಾನ್(ಖಡ್ಗ) ವನ್ನು ಧರಿಸಿವು ಹಕ್ಕಿಗಾಗಿ ಆಕೆ ಹೋರಾಟ ನಡೆಸಿ ಯಶಸ್ಸು ಸಾಧಿಸಿದ್ದರು.

ಪಲ್ಬಿಂದರ್ ಗೆ ಪತಿ, ಒಬ್ಬ ಮಗಳು, ಅವಳಿ ಗಂಡು ಮಕ್ಕಳಿದ್ದಾರೆ. ಕೆನಡಾ ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಕೌರ್ ನೇಮಕಕ್ಕೆ ವಿಶ್ವ ಸಿಖ್ ಸಂಘ ಸಂತೋಷ ವ್ಯಕ್ತಪಡಿಸಿದೆ. ಕೆನಡಾದಲ್ಲಿನ ಭಾರತೀಯ ಮೂಲದ ಪ್ರಮುಖರು ಆಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Loading...
loading...
error: Content is protected !!