ಪಾಕ್ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡ ನವಾಜ್ ಷರೀಫ್ – News Mirchi

ಪಾಕ್ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡ ನವಾಜ್ ಷರೀಫ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಗೆ ಪಾಕ್ ಸುಪ್ರೀಂ ಕೋರ್ಟ್ ದೊಡ್ಡ ಶಾಕ್ ನೀಡಿದೆ. ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿ ಶುಕ್ರವಾರ ತೀರ್ಪು ನೀಡಿದೆ. ಷರೀಫ್ ಸೇರಿದಂತೆ ಅವರಕುಟುಂಬ ಸದಸ್ಯರು ಎದುರಿಸುತ್ತಿರುವ ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ನ್ಯಾಯಾಲಯ ಈ ಆದೇಶ ನೀಡಿದೆ. ಅನರ್ಹಗೊಂಡಿದ್ದಾರೆಂದ ಮೇಲೆ ನವಾಜ್ ಷರೀಫ್ ಮುಂದಿನ 5 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಅತ್ಯಾಚಾರಕ್ಕೆ ಅತ್ಯಾಚಾರವೇ ಶಿಕ್ಷೆ : ಇದು ಪಾಕಿಸ್ತಾನದ ಗ್ರಾಮವೊಂದರ ತೀರ್ಪು!

ಆರು ಸದಸ್ಯರ ತನಿಖಾ ತಂಡ ಜಿಟ್ ಜುಲೈ 10 ರಂದು ನೀಡಿದ ವರದಿಯ ಆದಾರದ ಮೇಲೆ ಕೋರ್ಟ್ ಈ ಆದೇಶ ನೀಡಿದೆ. ಷರೀಫ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿರುವ ಕೋರ್ಟ್, ಷರೀಫ್ ಕೂಡಲೇ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಆದೇಶಿಸಿದೆ. ಮುಂದಿನ ದಿನಗಳಲ್ಲಿ ಷರೀಫ್ ಬಂಧನವಾಗುವ ಸಾಧ್ಯತೆಯೂ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

1990 ರಲ್ಲಿ ಷರೀಫ್ ಪ್ರಧಾನಿಯಾಗಿದ್ದಾಗ ಲಂಡನ್ ನಲ್ಲಿ ಭಾರೀ ಪ್ರಮಾಣದ ಆಸ್ತಿ ಖರೀದಿಸಲು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜಿಟ್ ತನಿಖೆ ಕೈಗೊಂಡಿತ್ತು. ಕಳೆದ ವರ್ಷ ಬಿಡುಗಡೆಯಾದ ಪನಾಮಾ ಪತ್ರಗಳೂ ನವಾಜ್ ಷರೀಫ್ ಅಕ್ರಮ ಆಸ್ತಿ ವ್ಯವಹಾರ ಬಯಲಿಗೆ ತಂದಿತ್ತು. ಷರೀಫ್ ಮಕ್ಕಳ ಹೆಸರಿನಲ್ಲಿರುವ ನಿಷ್ಕ್ರಿಯ ಕಂಪನಿಗಳ ಮೂಲಕ ಹಣವನ್ನು ದೇಶದಿಂದಾಚೆ ರವಾನೆ ಮಾಡಿರುವುದಾಗಿ ಆರೋಪಗಳು ದಾಖಲಾಗಿವೆ.

ಎರಡನೇ ತ್ರೈಮಾಸಿಕದಲ್ಲಿ ಬೆಸ್ಟ್ ಸೆಲ್ಲರ್ ಸ್ಮಾರ್ಟ್ ಫೋನ್ ಗಳಿವು

ಸುಪ್ರೀಂ ಕೋರ್ಟ್ ನಲ್ಲಿ ನವಾಜ್ ಷರೀಫ್ ಗೆ ವಿರುದ್ಧವಾಗಿ ತೀರ್ಪು ಬಂದಿದ್ದರಿಂದ ಅವರು ಹುದ್ದೆಯಿಂದ ಕೆಳಗಿಳಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಹುದ್ದೆಯಿಂದ ನವಾಜ್ ಷರೀಫ್ ಕೆಳಗಿಳಿದರೆ, ಅವರ ಸಹೋದರನನ್ನು ಪ್ರಧಾನಿ ಮಾಡಲು ವೇದಿಕೆ ಸಿದ್ಧಗೊಂಡಿದೆ ಎನ್ನಲಾಗಿದೆ.

Loading...