ವಿಗ್ರಹ ಮರು ಪ್ರತಿಷ್ಠಾಪನೆ ಸಮಯದಲ್ಲಿ ದೇಗುಲದಲ್ಲಿ ಸಿಕ್ಕ ರಹಸ್ಯ ಕೋಣೆ! |News Mirchi

ವಿಗ್ರಹ ಮರು ಪ್ರತಿಷ್ಠಾಪನೆ ಸಮಯದಲ್ಲಿ ದೇಗುಲದಲ್ಲಿ ಸಿಕ್ಕ ರಹಸ್ಯ ಕೋಣೆ!

ಸೇಲಂ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿನ ಗ್ರಾಮವೊಂದರಲ್ಲಿ ಒಂದು ಪುರಾತನ ದೇಗುಲದ ಭೂಗರ್ಭದಲ್ಲಿ ನಿಧಿಯೊಂದು ಬೆಳಕಿಗೆ ಬಂದಿದೆ. ದಶಕಗಳಿಂದ ಮುಚ್ಚಲಾಗಿದ್ದ ದೇಗುಲವನ್ನು ಇತ್ತೀಗಷ್ಟೇ ತೆರೆಯಲಾಗಿತ್ತು. ವಿಗ್ರಹದ ಮರು ಪ್ರತಿಷ್ಠಾಪನೆ ಮಾಡುವ ಸಲುವಾಗಿ ದೇಗುಲದ ಆವರಣದಲ್ಲಿ ಭೂಮಿ ಅಗೆಯುತ್ತಿದ್ದ ವೇಳೆ ಒಂದು ರಹಸ್ಯ ಕೋಣೆ ಬೆಳಕಿಗೆ ಬಂದಿದೆ. ಆ ಕೋಣೆಯಲ್ಲಿ ಶತಕಗಳ ಹಿಂದಿನ ಪಂಚಲೋಹ ವಿಗ್ರಹಗಳು ಪತ್ತೆಯಾಗಿವೆ.

ನವಕುರ್ಚಿ ಎಂಬ ಗ್ರಾಮದ ಸಮೀಪ ಪೂರ್ಣನಾರಾಯಣ ಪೆರುಮಾಳ್ ದೇಗುಲವಿದೆ. ಇದು ತುಂಬಾ ದಿನಗಳಿಂದ ಬಾಗಿಲು ಮುಚ್ಚಿತ್ತು. ಇತ್ತೀಚೆಗೆ ದೇಗುಲವನ್ನು ಪುನಃ ತೆರೆಯಲು ಗ್ರಾಮಸ್ಥರು ಮುಂದಾಗಿದ್ದರು. ಆದರೆ ದೇಗುಲದಲ್ಲಿ ಕೆಲ ವಾಸ್ತು ದೋಷಗಳಿವೆ, ಆಂಜನೇಯ ಸ್ವಾಮಿ ವಿಗ್ರಹ ಇರಬೇಕಾದ ಸ್ಥಳದಲ್ಲಿ ಇರದೆ, ಮತ್ತೊಂದೆಡೆ ಇದೆ ಎಂದು ಪಂಡಿತರು ಹೇಳಿದ್ದರು. ಆದ್ದರಿಂದ ಸ್ವಾಮಿಯ ವಿಗ್ರಹವನ್ನು ಸ್ವಲ್ಪ ದೂರದಲ್ಲಿ ಮರು ಪ್ರತಿಷ್ಠಾಪನೆ ಮಾಡಬೇಕೆಂದು ಗ್ರಾಮಸ್ಥರು ತೀರ್ಮಾನಿಸಿದರು. ಇದಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ರಹಸ್ಯ ಕೋಣೆ ಬೆಳಕಿಗೆ ಬಂದಿದೆ.

ರಹಸ್ಯ ಕೋಣೆಯನ್ನು ಕಂಡು ಕುತೂಹಲಗೊಂಡು ಗ್ರಾಮಸ್ಥರು ಹೋಗಿ ನೋಡಿದಾಗ, ಪೆರುಮಾಳ್ ವಿಗ್ರಹಗಳು ಕಾಣಿಸಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು, ಪುರಾತತ್ವ ಇಲಾಖೆ ಅಧಿಕಾರಿಗಳು ಮತ್ತು ಮುಜುರಾಯಿ ಇಲಾಖೆ ಅಧಿಕಾರಿಗಳು ಆಗಮಿಸಿ ವಿಗ್ರಹಗಳನ್ನು ಪರಿಶೀಲಿಸಿದರು. ಅಲ್ಲಿ ಲಭಿಸಿದ ವಿಗ್ರಹಗಳು 16ನೇ ಶತಮಾನಕ್ಕೆ ಸೇರಿದ್ದವೆಂದು ಅವರು ಹೇಳಿದ್ದಾರೆ.

ಸಂಪೂರ್ಣ ಚೀನಾವನ್ನು ಭಸ್ಮ ಮಾಡುವ ಸಾಮರ್ಥ್ಯದತ್ತ ಭಾರತ

ಈ ವಿಗ್ರಹಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ. ಇದಕ್ಕೆ ಮೊದಲು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಪೆರುಮಾಳ್ ವಿಗ್ರಹಗಳನ್ನು ಅದೇ ದೇಗುಲದಲ್ಲಿ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿದರು. ಆದರೆ ಅವರ ಮನವೊಲಿಸಿದ ಪೊಲೀಸರು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ವಿಗ್ರಹಗಳನ್ನು ಹೊತ್ತೊಯ್ದರು.

ಖಾಸಗಿ ಭದ್ರತಾ ಸಂಸ್ಥೆ ಸ್ಥಾಪಿಸಿದ ಬಾಬಾ ರಾಮದೇವ್

Loading...
loading...
error: Content is protected !!