ಜೀಪಿಗೆ ಕಲ್ಲೆಸೆಯುವಾತನ ಬದಲಿಗೆ ಅರುಂಧತಿ ರಾಯ್ ಳನ್ನು ಕಟ್ಟಬೇಕಿತ್ತು.. : ಪರೇಶ್ ರಾವಲ್

ಮುಂಬೈ: ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಪರೇಶ್ ರಾವಲ್ ಮಾಡಿದ ಟ್ವೀಟ್ ಸಂಚಲನ ಸೃಷ್ಟಿಸಿದೆ. ಕಳೆದ ರಾತ್ರಿ ಟ್ವೀಟರ್ ನಲ್ಲಿ ಲೇಖಕಿ ಅರುಂಧತಿ ರಾಯ್ ಅವರನ್ನು ಗುರಿಯಾಗಿಸಿ ರಾವಲ್ ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಜಮ್ಮ ಕಾಶ್ಮೀರದಲ್ಲಿ ಸೇನಾ ವಾಹನಕ್ಕೆ ಕಲ್ಲೆಸೆಯುವಾತನನ್ನು ಕಟ್ಟಿ ಯೋಧರು ತಮಗೆ ರಕ್ಷಾ ಕವಚವನ್ನಾಗಿ ಮಾಡಿಕೊಂಡಿದ್ದು ನಮಗೆ ತಿಳಿದದ್ದೇ. ಈ ರೀತಿ ಕಲ್ಲೆಸೆಯುವಾತನನ್ನು ಜೀಪಿಗೆ ಕಟ್ಟುವ ಬದಲು ಅರುಂಧತಿ ರಾಯ್ ಅವರನ್ನು ಕಟ್ಟಬೇಕಿತ್ತು ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.

ಶ್ರೀನಗರ ಉಪಚನಾವಣೆ ಸಂದರ್ಭದಲ್ಲಿ ಸೆಂಟ್ರಲ್ ಕಾಶ್ಮೀರದ ಬುದ್ಗಾಂ ಜಿಲ್ಲೆಯ ಗ್ರಾಮವೊಂದರಲ್ಲಿ ತಮ್ಮ ಮೇಲೆ ಸ್ಥಳೀಯ ಕಲ್ಲೆಸೆಯುವವರು ದಾಳಿ ನಡೆಸದಂತೆ ತಡೆಯಲು ವ್ಯಕ್ತಿಯೊಬ್ಬನನ್ನು ಜೀಪಿನ ಮುಂಭಾಗಕ್ಕೆ ಕಟ್ಟಿ ಸಾಗಿದ ಭದ್ರತಾ ಪಡೆಗಳ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದರು. ಚುನಾವಣಾ ಅಧಿಕಾರಿಗಳನ್ನು ಸುತ್ತುವರೆದು ಕಲ್ಲೆಸಯುತ್ತಿದ್ದವರಿಂದ ರಕ್ಷಣೆ ಪಡೆಯಲು ಸ್ಥಳೀಯ ಯುವಕನೊಬ್ಬನನ್ನು ಜೀಪಿನ ಮುಂಭಾಗದಲ್ಲಿ ಕಟ್ಟಿ ಭದ್ರತಾಪಡೆಗಳು ಸಾಗಿದ್ದವು.