ಕಳಪೆ ಗುಣಮಟ್ಟ, ಮಿಸ್‌ಬ್ರಾಂಡಿಂಗ್ : ಪತಂಜಲಿಗೆ ರೂ.11 ಲಕ್ಷ ದಂಡ – News Mirchi

ಕಳಪೆ ಗುಣಮಟ್ಟ, ಮಿಸ್‌ಬ್ರಾಂಡಿಂಗ್ : ಪತಂಜಲಿಗೆ ರೂ.11 ಲಕ್ಷ ದಂಡ

ಹರಿದ್ವಾರ: ಯೋಗಾ ಗುರು ರಾಮ್ ದೇವ್ ಒಡೆತನದ ಪತಂಜಲಿ ಕಂಪನಿಯ ಉತ್ಪನ್ನಗಳು ಗುಣಮಟ್ಟದಿಂದ ಕೂಡಿಲ್ಲಾ ಹಾಗೂ ಮಿಸ್ ಬ್ರಾಂಡಿಂಗ್ ಎಂದು ಸಾಬೀತಾದ್ದರಿಂದ ರೂ. ₹11 ಲಕ್ಷ ದಂಡ ವಿಧಿಸಲಾಗಿದೆ.

ಒಂದು ತಿಂಗಳೊಳಗೆ ಈ ದಂಡ ಪಾವತಿಸಬೇಕು ಮತ್ತು ಇಂತಹ ತಪ್ಪು ಮರುಕಳಿಸಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಅಡಿಷನಲ್ ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದೆ.

ಡಿಸೆಂಬರ್ 1 ರಂದು ತೀರ್ಪು ಹೊರಬಿದ್ದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ತಪ್ಪು ಜಾಹಿರಾತು ನೀಡಿ ಜನರನ್ನು ಯಾಮಾರಿಸಿದೆ ಎಂದು 2012 ರಲ್ಲಿ ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು. ಜೇನು ತುಪ್ಪ, ಉಪ್ಪು, ಜಾಮ್, ಮಸ್ಟರ್ಡ್ ಅಯಿಲ್ ಉತ್ಪನ್ನಗಳ ಮಾದರಿಗಳನ್ನು ಆ ವರ್ಷದ ನವೆಂಬರ್ ನಲ್ಲಿ ಸಂಗ್ರಹಿಸಿದ್ದರು. ಗುಣಮಟ್ಟವನ್ನು ಪ್ರಮಾಣವನ್ನು ಪಾಲಿಸಿರಲಿಲ್ಲ ಎಂದು ಆಗಲೇ ಸಾಬೀತಾಗಿತ್ತು.

ಕಳೆದ 4 ವರ್ಷಗಳಿಂದ ಮುಂದುವರೆದಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ಹರಿದ್ವಾಎ ಟಡಿಷನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟದ, ಪತಂಜಲಿ ಕಮಪನಿಗೆ ರೂ. 12 ಲಕ್ಷ ದಂಡ ವಿಧಿಸಿದೆ.

ಇತರೆ ಕಂಪನಿಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪತಂಜಲಿ ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ, ಸದ್ಯ ರೂ. 5 ಸಾವಿರ ಕೋಟಿ ಟರ್ನೋವರ್ ಹೊಂದಿರುವ ಕಂಪನಿ ಮುಂದಿನ ಹಣಕಾಸು ವರ್ಷದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಆದಾಯ ಗಳಿಸಲು ಯೋಜಿಸುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Loading...

Leave a Reply

Your email address will not be published.