ಸೋಲಾರ್ ಕ್ಷೇತ್ರಕ್ಕೆ ಪತಂಜಲಿ, ಚೀನಾದೊಂದಿಗೆ ದರ ಸಮರಕ್ಕೆ ಸಿದ್ಧವಂತೆ

ಪತಂಜಲಿ ಆಯುರ್ವೇದ ಕಂಪನಿಯು ಇದೀಗ ಸೋಲಾರ್ ಕ್ಷೇತ್ರದಲ್ಲೂ ತನ್ನ ಪಾರುಪತ್ಯ ಮೆರೆಯಲು ಮುಂದಾಗುತ್ತಿದೆ. ಇದಕ್ಕಾಗಿ ರೂ. 100 ಕೋಟಿ ಬಂಡವಾಳದೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ಕಾರ್ಖಾನೆ ಸ್ಥಾಪಿಸಲು ಯೋಜಿಸಿದೆ. ಯೋಗಾ ಗುರು ಬಾಬಾ ರಾಮದೇವ್ ಅವರ ಗೃಹಬಳಕೆ ವಸ್ತುಗಳ ಕಂಪನಿ ತನ್ನ ಸ್ವದೇಶಿ ಮಂತ್ರವನ್ನು ಈಗ ಸೋಲಾರ್ ಕ್ಷೇತ್ರಕ್ಕೂ ವಿಸ್ತರಿಸುತ್ತಿದೆ.

ದತ್ತಪೀಠ ಗಲಭೆ: ಹಲವರ ಬಂಧನ, ಪೆಟ್ರೋಲ್ ಬಾಂಬ್ ವಶ

ಸೋಲಾರ್ ಶಕ್ತಿಯೊಂದಿಗೆ ದೇಶದ ಪ್ರತಿ ಮನೆಯೂ ವಿದ್ಯುತ್ ಸಂಪರ್ಕ ಹೊಂದಬಹುದು, ನಾವಿದನ್ನು ಸಾಧ್ಯಗೊಳಿಸುತ್ತೇವೆ ಎಂದು ಪತಂಜಲಿ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ನೋಯ್ಡಾದಲ್ಲಿ ಕಂಪನಿಯ ಕಾರ್ಖಾನೆಯ ಸ್ಥಾಪನೆಯಾಗಲಿದೆ ಎನ್ನಲಾಗುತ್ತಿದೆ.

ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಸೌರ ಶಕ್ತಿಯಿಂದ ನಡೆಸಬೇಕು ಎಂದು ನಮ್ಮ ಬಯಕೆಯಾಗಿತ್ತು. ಆದರೆ ಅದಕ್ಕೆ ಕೈಹಾಕಿದಾಗ ತಿಳಿದದ್ದು, ಬಹುತೇಕ ಸೋಲಾರ್ ಪ್ಯಾನೆಲ್ ಗಳು ಚೀನಾದಿಂದಲೇ ಬರುತ್ತಿವೆ ಎಂಬುದು. ಭಾರತವೂ ಸೇರಿದಂತೆ ಚೀನಾದಿಂದ ಆಮದಾಗುತ್ತಿರುವ ಸೋಲಾರ್ ಮಾಡ್ಯೂಲ್ ಗಳಲ್ಲಿ ಗುಣಮಟ್ಟದ ಸ್ಥಿರತೆಯಿಲ್ಲ. ಹೀಗಾಗಿ ನಾವೇ ಸೋಲಾರ್ ಪ್ಯಾನೆಲ್ ಗಳನ್ನು ತಯಾರಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಹಿಂದೂಸ್ತಾನ ಪದ ಬಳಸಿದ್ದಕ್ಕೇ ಪಾಕ್ ಯುವಕನಿಗೆ ಜೈಲು

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಂದ ಆರಂಭವಾದ ಪತಂಜಲಿ ಸಂಸ್ಥೆಯು, ಇದೀಗ ಗೃಹಬಳಕೆ ವಸ್ತುಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಬೆಳೆದು ನಿಂತಿದೆ.

ಸೋಲಾರ್ ಪ್ಯಾನೆಲ್ ಗಳನ್ನು ನಾವು ಇಲ್ಲಿಯೇ ತಯಾರಿಸಲಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಚೀನಾ ಸೋಲಾರ್ ಪ್ಯಾನೆಲ್ ಗಳೊಂದಿಗೆ ಬೆಲೆ ಸಮರಕ್ಕೂ ನಾವು ಇಳಿಯಲಿದ್ದೇವೆ ಎಂದು ಬಾಲಕೃಷ್ಣ ಹೇಳಿದ್ದಾರೆ.

Get Latest updates on WhatsApp. Send ‘Subscribe’ to 8550851559