ಫಲಿಸದ ಬಿಜೆಪಿ ತಂತ್ರ : ಅಹಮದ್ ಪಟೇಲ್ ಗೆಲುವು, ಬಿಜಿಪಿಯಿಂದ ಅಮಿತ್ ಶಾ, ಸ್ಮೃತಿ ಇರಾನಿ ರಾಜ್ಯಸಭೆಗೆ |News Mirchi

ಫಲಿಸದ ಬಿಜೆಪಿ ತಂತ್ರ : ಅಹಮದ್ ಪಟೇಲ್ ಗೆಲುವು, ಬಿಜಿಪಿಯಿಂದ ಅಮಿತ್ ಶಾ, ಸ್ಮೃತಿ ಇರಾನಿ ರಾಜ್ಯಸಭೆಗೆ

ಗುಜರಾತ್ ರಾಜ್ಯಸಭೆ ಚುನಾವಣೆ ಮತದಾನದ ನಂತರ ನಡೆದ ಹಲವು ಗಂಟೆಗಳ ನಾಟಕೀಯ ಪರಿಣಾಮಗಳ ನಂತರ ಹಿರಿಯ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್, ಬಿಜೆಪಿಯ ಬಲವಂತ್ ಸಿಂಗ್ ರಜಪೂತ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಹಮದ್ ಪಟೇಲ್ ಐದನೇ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸುತ್ತಿದ್ದಾರೆ. ಮಂಗಳವಾರ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯಿಂದ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಗೆದ್ದು ಬಂದಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್ ನ ಇಬ್ಬರು ಶಾಸಕರು ಭೋಲಾಭಾಯಿ ಗೋಹಿಲ್ ಮತ್ತು ರಾಘವ್ ಜೀ ಪಟೇಲ್ ಬಿಜೆಪಿಗೆ ಮತ ಹಾಕಿದ್ದು, ಮತಪತ್ರಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ ಪ್ರದರ್ಶಿಸಿದ್ದರು. ಹೀಗಾಗಿ ಈ ಇಬ್ಬರ ಮತಗಳನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಮತದಾನ ಪ್ರಕ್ರಿಯೆಯ ವೀಡಿಯೋ ಸಾಕ್ಷಿಯನ್ನೂ ಚುನಾವಣಾ ಆಯೋಗಕ್ಕೆ ನೀಡಿತ್ತು. ಕಾಂಗ್ರೆಸ್ ಬೇಡಿಕೆಯನ್ನು ವಿರೋಧಿಸಿ ಬಿಜೆಪಿಯ ನಿಯೋಗವೂ ಚುನಾವಣಾ ಆಯೋಗವನ್ನು ಭೇಟಿ ಮಾಡಿತ್ತು.

  • No items.

ವಿವಾದಿತ ಸ್ಥಳದಲ್ಲಿಯೇ ರಾಮಮಂದಿರವಾಗಲಿ: ವಕ್ಫ್ ಬೋರ್ಡ್

ಎರಡೂ ಪಕ್ಷಗಳ ನಿಯೋಗಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಿದ ನಂತರ ತಡರಾತ್ರಿ ಸಭೆ ಸೇರಿದ ಆಯೋಗ, ಇಬ್ಬರು ಶಾಸಕರ ಮತಗಳನ್ನು ತಿರಸ್ಕರಿಸಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ವರವಾಯಿತು. ಇಬ್ಬರು ಶಾಸಕರ ಮತಗಳು ಅನರ್ಹಗೊಂಡ ನಂತರ ವಿಧಾನಸಭೆಯ ಶಾಸಕರ ಬಲ 174ಕ್ಕೆ ಇಳಿಯಿತು. ಹೀಗಾಗಿ ಸಹಜವಾಗಿಯೇ ಅಭ್ಯರ್ಥಿಗೆ ಗೆಲುವಿಗೆ ಬೇಕಿದ್ದ ಮತಗಳ ಸಂಖ್ಯೆ 45 ರಿಂದ 44ಕ್ಕೆ ಇಳಿಯಿತು. ಹೀಗಾಗಿ ಕಾಂಗ್ರೆಸ್ ನ ಅಹಮದ್ ಪಟೇಲ್ ಗೆಲುವು ಸುಲಭವಾಯಿತು.

Loading...
loading...
error: Content is protected !!