ಪಠಾಣ್‌ಕೋಟ್ ದಾಳಿ: ಮಸೂದ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಪಠಾನ್ಕೋಟ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ಇಂದು ಆರೋಪ ಪಟ್ಟಿ ಸಲ್ಲಿಸಿದೆ. ಈ ಚಾರ್ಜ್ ಶೀಟ್ ನಲ್ಲಿ ಪಾಕಿಸ್ತಾನದ ಜೈಷ್-ಎ-ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಪ್ರಮುಖ ಆರೋಪಿ ಎಂದು ಹೇಳಲಾಗಿದೆ.

ಆತನೊಂದಿಗೆ ಇನ್ನೂ ಮೂವರ ಹೆಸರುಗಳನ್ನು ಚಾರ್ಜ್ ಶೀಟಿನಲ್ಲಿ ಸೇರಿಸಿದೆ. ಉಗ್ರರ ದಾಳಿಯಲ್ಲಿ ಮಸೂದ್ ಪ್ರಮುಖ ಸೂತ್ರಧಾರಿ ಎಂದು, ಆತನ ಸಹೋದರ ಅಬ್ದುಲ್ ಅಸ್ಗರ್ ಹಾಗೂ ಇನ್ನಿಬ್ಬರಾದ ಶಾಹೀದ್ ಲತೀಫ್, ಕಾಸಿಫ್ ಜಾನ್ ಈ ದಾಳಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿದೆ.

ಪಠಾಣ್ ಕೋಟ್ ವಾಯುನೆಲೆಯ ಮೇಲೆ ಜನವರಿ 2 ರಂದು ನಡೆದ ಉಗ್ರರ ದಾಳಿಯಲ್ಲಿ ನಾಲ್ವರು ಉಗ್ರರನ್ನು ಸೇನೆ ಹತ್ಯೆ ಮಾಡಿತ್ತು.