ಗ್ರಾಹಕರ ಹಣದ ಸುರಕ್ಷತೆಗಾಗಿ ಪೇಟಿಎಂ ಗೆ ಹೊಸ ಫೀಚರ್

ನೋಟು ರದ್ದು ನಂತರ ತನ್ನ ಗ್ರಾಹಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುವ ಪೇಟಿಎಂ, ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಘೋಷಿಸಿದೆ. ‘ಆಪ್ ಪಾಸ್ವರ್ಡ್’ ಎಂಬ ಹೊಸ ಫೀಚರ್ ಅನ್ನು ಸೇರಿಸಿದ್ದು, ಇದರ ಮೂಲಕ ಪೇಟಿಎಂ ಗ್ರಾಹಕರು ತಮ್ಮ ವ್ಯಾಲೆಟ್ ನಲ್ಲಿ ಹಣದ ಭದ್ರತೆಗಾಗಿ ಸೆಕ್ಯೂರಿಟಿ ಪಿನ್, ಪಾಸ್ವರ್ಡ್, ಪ್ಯಾಟರ್ನ್ ಅಥವಾ ಫಿಂಗರ್ ಪ್ರಿಂಟ್ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಈ ಹೊಸ ವೈಶಿಷ್ಟ್ಯದಿಂದ ಮೊಬೈಲ್ ಕಳೆದರೂ ಬೇರೊಬ್ಬರು ಪೇಟಿಎಂ ವ್ಯಾಲೆಟ್ ದುರುಪಯೋಗ ಮಾಡುವುದನ್ನು ತಡೆಯಬಹುದು.

‘ಆಪ್ ಪಾಸ್ವರ್ಡ್’ ಫೀಚರ್ ಇತ್ತೀಚಿನ ಪೇಟಿಎಂ ಆಪ್ ನಲ್ಲಿ ಲಭ್ಯವಿದೆ. ಬಳಕೆದಾರರು ಮೊಬೈಲಿನ ಸೆಟ್ಟಿಂಗ್ಸ್ ನಲ್ಲಿ ಡಿಫಾಲ್ಟ್ ಸೆಕ್ಯೂರಿಟಿ ಪಾಸ್ವರ್ಡ್ ಸೆಟ್ ಮಾಡಿಕೊಳ್ಳಬಹುದು. ನಂತರ ಪಿನ್, ಪ್ಯಾಟರ್ನ್, ಪಾಸ್ವರ್ಡ್, ಫಿಂಗರ್ ಪ್ರಿಂಟ್ ಆಯ್ಕೆ ಮಾಡಿಕೊಳ್ಳಬಹುದು.

ಗ್ರಾಹಕರು ‘ಪೇ’ ಅಥವಾ ‘ಪಾಸ್ ಬುಕ್’ ಬಟನ್ ಒತ್ತಿದಾಗಲೂ ಈ ಫೀಚರ್ ಅಳವಡಿಸಿಕೊಳ್ಳಲು ಸಲಹೆ ಮಾಡುತ್ತದೆ. ಆಡ್ ಸೆಕ್ಯೂರಿಟಿ ಬಟನ್ ಕ್ಲಿಕ್ ಮಾಡಿದ ನಂತರ, ಗ್ರಾಹಕರಿಗೆ ಪಾಸ್ವರ್ಡ್ ಕನ್ಫರ್ಮ್ ಮಾಡುವಂತೆ ಕೇಳುತ್ತದೆ. ಗ್ರಾಹಕರು ಬಯಸಿದಲ್ಲಿ ಯಾವುದೇ ಸಮಯದಲ್ಲಿ ಈ ಸೆಕ್ಯೂರಿಟಿ ಫೀಚರ್ ಡಿಸೇಬಲ್ ಮಾಡುವ ಅವಕಾಶವಿದೆ. ಅಂಡ್ರಾಯ್ಡ್ ಸೆಕ್ಯೂರಿಟಿ ಮೆ‌ನುವಿನಲ್ಲಿ ಸೆಕ್ಯೂರಿಟಿ ಅಂಡ್ ಸೆಟ್ಟಿಂಗ್ಸ್ ಆಯ್ಕೆ ಮಾಡಿದರೆ, ಸೆಕ್ಯೂರಿಟಿ ಫೀಚರ್ ಡಿಸೇಬಲ್ ಮಾಡಲು ಅವಕಾಶವಿದೆ.

Related News

Loading...

Leave a Reply

Your email address will not be published.

error: Content is protected !!