ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಡಲು ಸಿದ್ಧವಾಗಿದೆ ಪೇಟಿಎಂ

ಇದುವರೆಗೂ ಮೊಬೈಲ್ ಪಾವತಿಗಳ ಸೇವೆ ನೀಡುತ್ತಿದ್ದ ಪೇಟಿಎಂ ಸಂಸ್ಥೆ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಇದಕ್ಕೆ ಬೇಕಾದ ಅನುಮತಿಯನ್ನು ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಪಡೆದಿದೆ.

ರಿಸರ್ವ್ ಬ್ಯಾಂಕ್ ನಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಆರಂಭಿಸಲು ಅನುಮತಿ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಕಂಪನಿ, ಪೇಮೆಂಟ್ ಬ್ಯಾಂಕ್ ಆರಂಭಿಸಲು ಕಾತರದಿಂದ ಇರುವುದಾಗಿ ಹೇಳಿದೆ. ಇದು ವರೆಗೂ ಮೊಬೈಲ್ ವ್ಯಾಲೆಟ್ ಆಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ, ಈಗ ಪೇಮೆಂಟ್ ಬ್ಯಾಂಕ್ ಮೂಲಕ ಬ್ಯಾಂಕಿಂಗ್ ಪ್ರಪಂಚದಲ್ಲಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಪೇಟಿಎಂ ಸಂಸ್ಥೆ ತಿಳಿಸಿದೆ.

ದೇಶದಲ್ಲಿ ನೋಟು ರದ್ದಾದ ನಂತರ ಪೇಟಿಎಂ ಅನ್ಲೈನ್ ಪೇಮೆಂಟ್ ಗ್ರಾಹಕರಲ್ಲಿ ಗಣನೀಯ ಏರಿಕೆ ಕಂಡಿದೆ.

Related News

Loading...

Leave a Reply

Your email address will not be published.

error: Content is protected !!