ಈ ಧಾರಾವಾಹಿ ಕುರಿತು ಕೇಂದ್ರ ಸಚಿವೆ ಕಿಡಿ – News Mirchi

ಈ ಧಾರಾವಾಹಿ ಕುರಿತು ಕೇಂದ್ರ ಸಚಿವೆ ಕಿಡಿ

ವಿವಾದಿತ ಹಿಂದಿ ಧಾರಾವಾಹಿ “ಪೆಹ್ರೆದಾರ್ ಪಿಯಾ ಕೀ” ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ  ಕಿಡಿ ಕಾರಿದ್ದಾರೆ. 9 ವರ್ಷದ ಬಾಲಕ 18 ವರ್ಷದ ಯುವತಿಯನ್ನು ಮದುವೆಯಾಗುವ ಕಥೆಯನ್ನು ಹೊಂದಿರುವ ಈ ಧಾರಾವಾಹಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಬ್ರಾಡ್ಕಾಸ್ಟಿಂಗ್ ಕಂಟೆಂಟ್ ಕಂಪ್ಲೇಂಟ್ಸ್ ಕೌನ್ಸಿಲ್(ಬಿಸಿಸಿಸಿ) ಗೆ ಪತ್ರ ಬರೆದಿದ್ದಾರೆ. ಹೆಚ್ಚಿನ ಗಮನ ಹರಿಸಿ ಈ ಧಾರಾವಾಹಿ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಈ ಧಾರವಾಹಿಯಲ್ಲಿ 9 ವರ್ಷದ ಬಾಲಕ 18 ವರ್ಷದ ಯುವತಿಯನ್ನು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮದುವೆಯಾಗಬೇಕಾಗಿ ಬರುತ್ತದೆ. ಆ ನಂತರ ನಡೆಯುವುದೇನು ಎಂಬುದೇ ಧಾರಾವಾಹಿ ಕಥೆ. 18 ವರ್ಷ ಯುವತಿಯನ್ನು ಬಾಲಕ ಬೆನ್ನುಬಿದ್ದಿರುವಂತೆ, ಮೊದಲ ರಾತ್ರಿಯ ಬಗ್ಗೆ ಹೇಳುತ್ತಿರುವಂತೆ ಆಕ್ಷೇಪಾರ್ಹ ಸನ್ನಿವೇಶಗಳಿರುವುದರಿಂದ ನೆಟ್ಟಿಗರು ತೀವ್ರ ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಪ್ರೈಮ್ ಟೈಮಲ್ಲಿ ಬರುತ್ತಿರುವ ಈ ಧಾರಾವಾಹಿ ಕುರಿತು ವೀಕ್ಷಕರ ಮೆಲೆ ಪ್ರಭಾವ ಬೀಳುವುದರೊಂದಿಗೆ, ಮಕ್ಕಳ ಆಲೋಚನಾ ವಿಧಾನವನ್ನೇ ಬದಲಿಸುವ ಸಾಧ್ಯತೆ ಇದೆ ಎಂದು ಹಲವರು ವಾದಿಸುತ್ತಿದ್ದಾರೆ.

ಚೇಂಜ್ ಡಾಟ್ ಒ.ಆರ್.ಜಿ(Change.org) ಮೂಲಕ ಮ್ಯಾನ್ಸಿ ಜೈನ್ ಎಂಬ ಪಿಟೀಷನರ್ ಈ ಸೀರಿಯಲ್ ವಿರುದ್ಧ ಆನ್ಲೈನ್ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದ್ದಾರೆ. ಈಗಾಗಲೇ ಈ ಪಿಟೀಷನ್ ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಂದಿಸಿದ್ದಾರೆ. ಸೀರಿಯಲ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಬಿಸಿಸಿಸಿ ಯನ್ನು ಕೋರಿದ್ದಾರೆ.

Loading...