ಹೊಟ್ಟೆಯಲ್ಲಿ ಕೊಕೇನ್ ಸಾಗಿಸುತ್ತಿದ್ದವರ ಬಂಧನ – News Mirchi

ಹೊಟ್ಟೆಯಲ್ಲಿ ಕೊಕೇನ್ ಸಾಗಿಸುತ್ತಿದ್ದವರ ಬಂಧನ

ಹೊಸ ವರ್ಷದ ಆಚರಣೆಗಾಗಿ ಕೊಕೇನ್ ಉಂಡೆಗಳನ್ನು ಹೊಟ್ಟೆಯಲ್ಲಿ ಅಡಗಿಸಿ ಸಾಗಿಸುತ್ತಿದ್ದ ಇಬ್ಬರು ವಿದೇಶೀಯರನ್ನು ಮಾದಕವಸ್ತು ನಿಯಂತ್ರಣ ದಳ (NCB) ಬಂಧಿಸಿದೆ.

ಬಂಧಿತರಲ್ಲಿ ಒಬ್ಬಳು ಬ್ರೆಜಿಲ್ ಮಹಿಳೆಯಾಗಿದ್ದು, ಕೊಕೇನ್ ಕ್ಯಾಪ್ಸೂಲ್ ಗಳನ್ನು ಹೊಟ್ಟೆಯಲ್ಲಿ ಅಡಗಿಸಿ ಸಾಗಿಸುತ್ತಿದ್ದಳು. ಇದನ್ನು ಡಿಸೆಂಬರ್ 30 ರಂದು ದೆಹಲಿಯ ಇಂಧಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ಅಧಿಕಾರಿಗಳು, ಅಕೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಹೊಟ್ಟೆಯಿಂದ 65 ಕ್ಯಾಪ್ಸೂಲ್ ಗಳನ್ನು ಹೊರತೆಗೆದಿದ್ದು, ಇನ್ನೂ ಎರಡು ಕ್ಯಾಪ್ಸೂಲ್ ಹೊಟ್ಟೆಯಲ್ಲಿರುವುದಾಗಿ ಎಕ್ಸ್ ರೇ ಮೂಲಕ ತಿಳಿದು ಬಂದಿದೆ.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಆಫ್ಘನಿಸ್ತಾನ ಪ್ರಜೆ ಮೊ. ಖಾಸಿಮ್ ಎಂಬಾತನನ್ನೂ ಮಂಗಳವಾರ ಅದೇ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನನ್ನೂ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಹೊಟ್ಟೆಯಿಂದ 90 ಕೊಕೇನ್ ತುಂಬಿಸಿದ್ದ ಕ್ಯಾಪ್ಸುಲ್ ಹೊರತೆಗೆದಿದ್ದಾರೆ.

ವಶಪಡಿಸಿಕೊಂಡ ಮಾದಕ ಪದಾರ್ಥದ ಮೌಲ್ಯ ಕೆಲ ಕೋಟಿಗಳಲ್ಲಿದೆ ಎನ್ನಲಾಗುತ್ತಿದೆ.

Loading...

Leave a Reply

Your email address will not be published.