ಇಸ್ಲಾಮಿಕ್ ಸ್ಟೇಟ್ಸ್ ಮುಖ್ಯಸ್ಥ ಬಾಗ್ದಾದಿ ಜೀವಂತವಿದ್ದಾನೆ ಎಂದ ಅಮೆರಿಕಾ – News Mirchi

ಇಸ್ಲಾಮಿಕ್ ಸ್ಟೇಟ್ಸ್ ಮುಖ್ಯಸ್ಥ ಬಾಗ್ದಾದಿ ಜೀವಂತವಿದ್ದಾನೆ ಎಂದ ಅಮೆರಿಕಾ

ವಾಷಿಂಗ್ಟನ್: ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದ ಇಸ್ಲಾಮಿಕ್ ಸ್ಟೇಟ್ಸ್ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿ ಇನ್ನೂ ಜೀವಂತವಾಗಿದ್ದಾನೆಂದು ಎಂದು ಭಾವಿಸಿದ್ದೇವೆ ಎಂದು ಪೆಂಟಗಾನ್ ಮುಖ್ಯಸ್ಥ ಜಿಮ್ ಮ್ಯಾಟಿಸ್ ಹೇಳಿದ್ದಾರೆ. ಈ ಕುರಿತು ಖುರ್ದಿಶ್ ಗುಪ್ತಚರ ಮೂಲಗಳು ದೃಢಪಡಿಸಿದ ನಂತರ ಜಿಮ್ ಮ್ಯಾಟಿಸ್ ಈ ಹೇಳಿಕೆ ನೀಡಿದ್ದಾರೆ. ಆತ ಬದುಕಿದ್ದಾನೆ ಎಂದು ಭಾವಿಸಿ ಆತನ ವಿರುದ್ಧ ಕಾರ್ಯಚರಣೆ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.

ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಇತ್ತೀಚೆಗೆ ಸುದ್ದಿಗಳು ಹರಿದಾಡಿದ್ದವು. ಯುದ್ಧಪೀಡಿತ ಸಿರಿಯಾದಲ್ಲಿರುವ ಬ್ರಿಟನ್ ಮೂಲದ ಮಾನವ ಹಕ್ಕುಗಳ ವೀಕ್ಷಕರು ಬಾಗ್ದಾದಿ ಸತ್ತಿದ್ದಾನೆ ಎಂಬುದಾಗಿ ಹೇಳಿತ್ತು. ಬಾಗ್ದಾದಿ ಸತ್ತಿರುವುದಾಗಿ ಹಿರಿಯ ಇಸ್ಲಾಮಿಕ್ ಸ್ಟೇಟ್ಸ್ ನಾಯಕರೇ ಹೇಳಿದ್ದರೆಂದು ಅದು ವರದಿ ಮಾಡಿತ್ತು.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲೀಗ ರಾಜಾತಿಥ್ಯ, ಬೀಡಿ, ಸಿಗರೇಟ್, ಮದ್ಯಕ್ಕೆ ಕತ್ತರಿ

ಮೇ ತಿಂಗಳಲ್ಲಿ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಗ್ದಾದಿ ಸತ್ತಿದ್ದಾನೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿತ್ತು. ಇದರ ಬೆನ್ನಲ್ಲೇ ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂಬ ಮಾತುಗಳು ಕೇಳಿಬಂದವು.

Loading...