ಭ್ರಷ್ಟಾಚಾರ ವಿರುದ್ಧ ಹೋರಾಡುವುದೇ ತಪ್ಪಾ? : ಮೋದಿ

ಮೊರಾದಾಬಾದ್, ಡಿ.3: ದೇಶದ ಜನತೆಯೇ ನನ್ನ ಹೈಕಮಾಂಡ್ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿಯ ಪರಿವರ್ತನ ರ‌್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲಿ ಬಡತನವನ್ನು ನಿರ್ಮೂಲನೆ ಮಾಡುವುದರಿಂದ ಬಹು ದೊಡ್ಡ ಪರಿಣಾಮ ಬೀರುತ್ತದೆ ಎಂದರು.

ಭ್ರಷ್ಟಾಚಾರ ಸಮಸ್ಯೆ ಕುರಿತು ಮಾತನಾಡುತ್ತಿದ್ದ ಪ್ರಧಾನಿ, ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡಬಾರದೇ? ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಅಪರಾಧವೇ? ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಕ್ಕೆ ಕೆಲವರು ನನ್ನದು ತಪ್ಪು ಎಂದು ಹೇಳುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರಿಗೆ ಅವಕಾಶ ಸಿಕ್ಕಾಗಲೆಲ್ಲಾ ದೇಶ ಸೇವೆ ಮಾಡುತ್ತಾರೆ, ಅಭಿವೃದ್ಧಿ ಪಥದಲ್ಲಿ ಸಾಗುತ್ತಾರೆ ಎಂದು ಮೋದಿ ಹೇಳಿದರು. ದೇಶದ ಜನತೆಯೇ ನನ್ನ ಹೈಕಮಾಂಡ್ ಎಂದು ನೆರೆದಿದ್ದ ಜನರನ್ನುದ್ದೇಶಿಸಿ ಹೇಳಿದರು.

Calling people of the nation as his ‘ high command’, Prime Minister Narendra Modi on Saturday said eliminating poverty from a huge state like Uttar Pradesh and others will have a huge ‘impact’.