ಕಿಡ್ನಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಇಲ್ಲಿದೆ ಕೆಲವು ಸಲಹೆ – News Mirchi

ಕಿಡ್ನಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಇಲ್ಲಿದೆ ಕೆಲವು ಸಲಹೆ

ದೇಹದ ಅಂಗಾಗಂಗಗಳಲ್ಲಿ ಕಿಡ್ನಿಗಳೂ ಪ್ರಮುಖವಾದವು. ರಕ್ತದಲ್ಲಿನ ಕಲ್ಮಶಗಳನ್ನು ತೊಲಗಿಸಿ ರಕ್ತವನ್ನು ಶುದ್ಧೀಕರಿಸುವುದು ಇದರ ಜವಾಬ್ದಾರಿ. ಇವು ನಿರಂತರವಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಕಲ್ಮಶಗಳನ್ನು ತೊಲಗಿಸುವ ಪ್ರಕ್ರಿಯೆಯಲ್ಲಿ ಕಿಡ್ನಿಯಲ್ಲಿ ಕಲ್ಲು ಉಂಟಾಗಹಬುದು. ಆದರೆ ಇವುಗಳನ್ನು ಆಗಾಗ ಸ್ವಚ್ಛಗೊಳಿಸಿಕೊಂಡರೆ ಆರೋಗ್ಯಕ್ಕೆ ಉತ್ತಮ. ಇಲ್ಲವೆಂದರೆ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಕಿಡ್ನಿಗಳನ್ನು ನೈಸರ್ಗಿಕವಾಗಿ ಹೇಗೆ ಶುಭ್ರಗೊಳಿಸುವುದು ಎಂಬುದನ್ನು ತಿಳಿಯೋಣ.

ಕಿಡ್ನಿಗಳನ್ನು ಸಲುಭವಾಗಿ ಶುಚಿಗೊಳಿಸಬಲ್ಲ ಏಕೈಕ ವಸ್ತು ಕುಡಿಯುವ ನೀರು. ಸುಮಾರು 8 ರಿಂದ 10 ಲೋಟಗಳಷ್ಟು ನೀರನ್ನು ಪ್ರತಿ ದಿನ ಕುಡಿಯಬೇಕು. ಬೇರೆ ಸಮಸ್ಯೆಯಾಗದಿದ್ದರೆ ಇನ್ನೂ ಹೆಚ್ಚೂ ಕುಡಿಯಬಹುದು. ನೀರು ವಿಷಕಾರಿ ಅಂಶಗಳನ್ನು ಶುದ್ಧೀಕರಿಸಿ ತೊಲಗಿಸುತ್ತದೆ. ನಿಮ್ಮ ಮೂತ್ರ ಶುಭ್ರವಾಗಿ, ಯಾವುದೇ ದುರ್ನಾತವಿಲ್ಲದೆ ಇದ್ದರೆ ನೀವೂ ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂದರ್ಥ. ಇಲ್ಲವೆಂದರೆ ಇನ್ನೂ ಹೆಚ್ಚಾಗಿ ನೀರು ಕುಡಿಯಬೇಕು ಎಂದರ್ಥ.

ರಕ್ತದಲ್ಲಿ ಹೆಚ್ಚು ಪೊಟ್ಯಾಷಿಯಂ ಅಂಶವಿದ್ದರೂ ಕಷ್ಟ, ತುಂಬಾ ಕಡಿಮೆಯಿದ್ದರೂ ಕಷ್ಟ. ನಮ್ಮ ಕಿಡ್ನಿಗಳು ದೇಹದಲ್ಲಿನ ಹೆಚ್ಚುವರಿ ಪೊಟ್ಯಾಷಿಯಂ ಅನ್ನು ಹೊರಹಾಕುವ ಮೂಲಕ ಪೊಟ್ಯಾಷಿಯಂ ಲೆವಲ್ ಅನ್ನು ಸಮತೋಲನ ಮಾಡುತ್ತದೆ. ಆದರೆ ಕೆಲವು ಕಾರಣಗಳಿಂದಾಗಿ ರಕ್ತದಲ್ಲಿನ ಪೊಟ್ಯಾಷಿಯಂ ಮಟ್ಟ ಅಧಿಕವಾಗುವ ಸಾಧ್ಯತೆಯೂ ಇರುತ್ತದೆ. ಕಿಡ್ನಿ ಸಮಸ್ಯೆಯಿರುವವರು ಹೆಚ್ಚು ಪೊಟ್ಯಾಷಿಯಂ ಅಂಶ ಇರುವಂತಹ ಪದಾರ್ಥಗಳನ್ನು ಸೇವಿಸಬಾರದು. ಉದಾಹರಣೆಗೆ ಬಾಳೆ ಹಣ್ಣು, ಆಲೂಗಡ್ಡೆ, ಹಾಲು ಮತ್ತು ಟೊಮ್ಯಾಟೋ ಉತ್ಪನ್ನಗಳಲ್ಲಿ ಹೆಚ್ಚು ಪೊಟ್ಯಾಷಿಯಂ ಅಂಶವಿರುತ್ತದೆ. ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್, ಎಲೆಕೋಸು ಮುಂತಾದ ಕಡಿಮೆ ಪೊಟ್ಯಾಷಿಯಂ ಅಂಶವಿರುವ ಪದಾರ್ಥಗಳನ್ನು ಸೇವಿಸಬಹುದು.

ಈಕೆಯ ಕಣ್ಣಿನಲ್ಲಿ ಸಿಕ್ಕಿದ್ದು 27 ಕಾಂಟ್ಯಾಕ್ಟ್ ಲೆನ್ಸ್!

ವೈದ್ಯರು ಹೇಳುವಂತೆ ನಮ್ಮ ರಕ್ತದಲ್ಲಿನ ಪೊಟ್ಯಾಷಿಯಂ ಮಟ್ಟ 3.6 ರಿಂದ 5.2 ಮಿಲಿಮೋಲ್ಸ್(mmol/L) ನಷ್ಟಿರಬೇಕಂತೆ. 5.5 mmol/L ಗಿಂತ ಹೆಚ್ಚಾದರೂ ಜೀವಕ್ಕೆ ಹೆಚ್ಚಿನ ತೊಂದರೆ. ಸುಸ್ತಾಗುವುದು, ದೇಹ ಮರಗಟ್ಟಿದಂತಾಗುವುದು, ವಾಕರಿಕೆ, ಉಸಿರಾಟದ ತೊಂದರೆ, ಎದೆ ನೋವು, ಅನಿಯಮಿತ ಹೃದಯ ಬಡಿತಗಳು ಹೈಪೊಟ್ಯಾಷಿಯಂ ನ ಲಕ್ಷಣಗಳು. ಇವುಗಳು ಕಂಡು ಬಂದಾಗ ನಿರ್ಲಕ್ಷಿಸದೆ ನೀವು ತಜ್ಞ ವೈದ್ಯರನ್ನು ಭೇಟಿ ಮಾಡಲೇಬೇಕು.

ಜವೆ ಗೋಧಿ(ಬಾರ್ಲೀ) ಕಾಳು ನೋಡಲು ಗೋಧಿಯಂತೆಯೇ ಇರುತ್ತದೆ. ಆದರೆ ಇದರಿಂದ ನಮ್ಮ ಆರೋಗ್ಯ ದೃಷ್ಟಿಯಿಂದ ತುಂಬಾ ಉತ್ತಮ ಆಹಾರ ಪದಾರ್ಥವೆನ್ನಬಹುದು. ದಿನನಿತ್ಯ ಹಿಡಿಯಷ್ಟು ಬಾರ್ಲೀ ಕಾಳುಗಳನ್ನು ಒಂದು ಪಾತ್ರೆಯಲ್ಲಿನ ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ನಂತರ ತಣ್ಣಗೆ ಮಾಡಿ ಆ ನೀರನ್ನು ಶೋಧಿಸಿ ಆ ನೀರಿನಲ್ಲಿ ಸ್ವಲ್ಪ ನಿಂಬೆ ರಸ ಬೆರೆಸಿ ಪ್ರತಿ ನಿತ್ಯ ಒಮ್ಮೆ ಕುಡಿಯಬೇಕು. ಇದರಿಂದ ಕಿಡ್ನಿಗಳು ಶುಭ್ರವಾಗುತ್ತವೆ. ಕಿಡ್ನಿ ಕಲ್ಲಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಬಾಟಲ್ ನೀರಿಗೇಕೆ ಬೇಕು ಎಕ್ಸ್ಪೈರಿ ಡೇಟ್?

ಮದ್ಯಪಾನ ಧೂಮಪಾನ ಬಿಟ್ಟರೆ ಉತ್ತಮ. ಹಾಗೆಯೇ ಕೆಫೀನ್ ಹೆಚ್ಚಾಗಿರುವ ಕಾಫಿ, ಟೀ, ಚಾಕೋಲೇಟ್ ಗಳನ್ನು ಸೇವಿಸಬಾರದು. ಕಾಫಿ ಅಭ್ಯಾಸವಿರುವವರು ದಿನದಲ್ಲಿ ಒಮ್ಮೆ ಮಾತ್ರ ಸೇವಿಸಿದರೆ ಉತ್ತಮ. ಹೆಚ್ಚಾಗಿ ಇವನ್ನು ಸೇವಿಸುವುದರಿಂದ ಕಿಡ್ನಿಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇವುಗಳಲ್ಲಿನ ವಿಷಕಾರಿ ಪದಾರ್ಥಗಳನ್ನು ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ ಕಿಡ್ನಿಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹೀಗಾಗಿ ಕ್ರಮೇಣ ಕಿಡ್ನಿಗಳು ಹಾಳಾಗುವ ಸಾಧ್ಯತೆಗಳಿವೆ.

Loading...