ಆಗ ಭಾರತದ ಮೇಲೆ ಅಣುಬಾಂಬ್ ದಾಳಿಗೆ ಪಾಕ್ ಹೆದರಿದ್ದೇಕೆ? – News Mirchi
We are updating the website...

ಆಗ ಭಾರತದ ಮೇಲೆ ಅಣುಬಾಂಬ್ ದಾಳಿಗೆ ಪಾಕ್ ಹೆದರಿದ್ದೇಕೆ?

ದುಬೈ: ಭಾರತದ ಮೇಲೆ ಅಣುಬಾಂಬ್ ದಾಳಿ ನಡೆಸಬೇಕೆಂದು 2001 ರಲ್ಲಿ ಚಿಂತನೆ ನಡೆಸಿದ್ದೆವು ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ. ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಷರಫ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

2001 ರಲ್ಲಿ ಭಾರತದ ಪಡೆಗಳು ಪಾಕ್ ಗಡಿಯುದ್ದಕ್ಕೂ ನಿಯೋಜನೆಗೊಂಡಿದ್ದವು. ಪಾಕ್ ಕೂಡಾ ಯುದ್ಧಕ್ಕೆ ಸಿದ್ಧವಾಗಿ ನಿಂತಿತ್ತು. ಒಂದು ಹಂತದಲ್ಲಿ ಭಾರತದ ಮೇಲೆ ಅಣುಬಾಂಬ್ ಎಸೆಯಲು ಪಾಕ್ ಯೋಚಿಸಿತ್ತಂತೆ. ಆದರೆ ಭಾರತದ ಬಳಿ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಂಖ್ಯೆ ಅಣು ಬಾಂಬುಗಳು ಇದ್ದುದು, ಪಾಕ್ ಯಾವುದೇ ರೀತಿಯ ದಾಳಿ ನಡೆದರೂ ನಿಮಿಷಗಳಲ್ಲೇ ಭಾರತ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅಲ್ಲಿನ ರಕ್ಷಣಾ ತಜ್ಞರು ಅನುಮಾನ ವ್ಯಕ್ತಪಡಿಸಿದ್ದರಿಂದ, ಹೆದರಿದ ಮುಷರಫ್ ಈ ಯೋಚನೆಯನ್ನು ಅಲ್ಲಿಗೇ ಬಿಟ್ಟರಂತೆ.

ಅವರು ಆದೇಶಿಸಿದರೆ ಮುಂದಿನ ವಾರ ಚೀನಾ ಮೇಲೆ ಪರಮಾಣು ದಾಳಿಗೆ ಸಿದ್ಧ!

1999 ರಲ್ಲಿ ಪ್ರಧಾನಿ ನವಾಜ್ ಷರೀಫ್ ರನ್ನು ಅಧಿಕಾರದಿಂದ ಕೆಳಗಿಳಿಸಿದ್ದ ಮುಷರಫ್ 2001 ರಿಂದ 2008 ರವರೆಗೆ ಪಾಕ್ ಸೇನಾಧಿಕಾರಿಯಾಗಿ ಮುಂದುವರೆದರು. ಕೆಲ ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಮತ್ತೆ ಚುನಾವಣೆ ನಡೆಯಿತು. ಆಗ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್ ಪುನಃ ಅಧಿಕಾರಕ್ಕೇರಿತು. ಮುಷರಫ್ ವಿರುದ್ಧ ಅನೇಕ ಆರೋಪಗಳು ದಾಖಲಾದವು. ಇವುಗಳಲ್ಲಿ ಮುಖ್ಯವಾದದ್ದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ. ಈ ಕುರಿತು ವಿಚಾರಣೆ ನಡೆಯುತ್ತಿದೆ. ಮುಷರಫ್ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದೇಶದಲ್ಲಿ ಚಿಕಿತ್ಸೆ ಪಡೆಯಲು ನವಾಜ್ ಷರೀಫ್ ಅನುಮತಿ ನೀಡಿದ್ದರು.

ಆಪರೇಷನ್ ಪರಾಕ್ರಮ್

2001 ರಲ್ಲಿ ಭಾರತದ ಸಂಸತ್ತಿನ ಮೇಲೆ ಪಾಕಿಸ್ತಾನದಿಂದ ಬಂದ ಕೆಲ ಉಗ್ರರು ದಾಳಿ ನಡೆಸಿದರು. ಈ ದಾಳಿಯನ್ನು ಸಂಸತ್ ಭದ್ರತಾ ಸಿಬ್ಬಂದಿ ಧೈರ್ಯವಾಗಿ ಎದುರಿಸಿ ವಿಫಲಗೊಳಿಸಿದರು. ಭಾರತದ ಮೇಲೆ ನಡೆದ ಆ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪಾಕಿಸ್ತಾನಕ್ಕೆ ಬುದ್ದಿ ಹೇಳಲು ಭಾರತ ಸರ್ಕಾರ ಆಪರೇಷನ್ ಪರಾಕ್ರಮ್ ಹೆಸರಿನಲ್ಲಿ ಪಾಕ್ ಗಡಿಯುದ್ದಕ್ಕೂ ಬೃಹತ್ ಪ್ರಮಾಣದಲ್ಲಿ ಶಸ್ತ್ರಸಜ್ಜಿತ ಪಡೆಗಳನ್ನು ಕಳುಹಿಸಿತು. ಪಾಕ್ ಕೂಡಾ ತನ್ನ ಸೇನೆಯನ್ನು ಸಿದ್ಧವಾಗಿಟ್ಟುಕೊಂಡಿತ್ತು. ಬಹುತೇಕ ಯುದ್ಧ ಇನ್ನೇನು ಆರಂಭವಾಗೇ ಬಿಟ್ಟಿತು ಎಂಬ ಹಂತದಲ್ಲಿ ಉಭಯದೇಶಗಳ ನಡುವಿನ ಉದ್ವಿಘ್ನ ವಾತಾವರಣ ತಣಗಾಗುತ್ತಾ ಬಂದಿತ್ತು.

ಟೆರರ್ ಫಂಡಿಂಗ್: 7 ಕಾಶ್ಮೀರ ಪ್ರತ್ಯೇಕತಾವಾದಿಗಳ ಬಂಧನ

Contact for any Electrical Works across Bengaluru

Loading...
error: Content is protected !!