ದೇಶಾದ್ಯಂತ ಪೆಟ್ರೋಲ್ ಬಂಕ್ ಗಳ ಬಂದ್ – News Mirchi

ದೇಶಾದ್ಯಂತ ಪೆಟ್ರೋಲ್ ಬಂಕ್ ಗಳ ಬಂದ್

ಇದೇ ತಿಂಗಳು 13 ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಗಳು ಮುಷ್ಕರ ನಡೆಸಲಿವೆ. ಬಾಕಿ ಇರುವ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಸುಮಾರು 54 ಸಾವಿರ ಪೆಟ್ರೋಲ್ ಬಂಕ್ ಗಳು ಬಂದ್ ಮಾಡಲಿವೆ ಎಂದು ಪೆಟ್ರೋಲ್ ಬಂಕ್ ಆಪರೇಟರ್ಸ್ ಅಸೋಸಿಯೇಷನ್ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

ದೇಶಾದ್ಯಂತ ಪೆಟ್ರೋಲ್ ಬಂಕ್ ಬಂದ್ ನಡೆಸಲು ಪೆಟ್ರೋಲ್ ಬಂಕ್ ಗಳ ಸಂಘಟನೆ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್ಲೈನ್ಸ್ ಉಲ್ಲಂಘಿಸಿದ್ದಕ್ಕೆ ವಿಧಿಸುತ್ತಿರುವ ದಂಡವನ್ನು ರದ್ದು ಮಾಡುವಂತೆಯೂ ಪೆಟ್ರೋಲ್ ಬಂಕ್ ಗಳು ಒತ್ತಾಯಿಸುತ್ತಿವೆ.

ಪ್ರತಿ ದಿನ ಪೆಟ್ರೋಲ್ ದರಗಳ ಪರಿಷ್ಕರಣೆಯಿಂದಾಗಿ ವಿತರಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಯುಪಿಎಫ್ ಸಭೆಯಲ್ಲಿ ಚರ್ಚೆ ನಡೆದಿದ್ದಾಗಿ ತಿಳಿದು ಬಂದಿದೆ. ಪೆಟ್ರೋಲ್ ಸಂಬಂಧಿತ ಉತ್ಪನ್ನಗಳನ್ನು ಜಿ.ಎಸ್.ಟಿ ಅಡಿಯಲ್ಲಿ ತರಬೇಕೆಂಬ ವಿಷಯದ ಕುರಿತೂ ಚರ್ಚೆ ನಡೆದಿದೆ ಎನ್ನಲಾಗಿದೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!