ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಳ

ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯಾಗಿದೆ. ಒಂದು ಲೀಟರ್ ಪೆಟ್ರೋಲ್ ಗೆ 89 ಪೈಸೆ, ಡೀಸೆಲ್ ಬೆಲೆಯಲ್ಲಿ 86 ಪೈಸೆ ಹೆಚ್ಚಳವಾಗಿದೆ. ಹೊಸ ದರಗಳು ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. ವಾಸ್ತವವಾಗಿ ಐದು ದಿನಗಳ ಹಿಂದೆಯೇ ಬೆಲೆಯೇರಿಕೆ ಆಗಬೇಕಿತ್ತು. ಆದರೆ ಪೆಟ್ರೋಲ್ ಬಂಕ್ ಡೀಲರ್ ಗಳ ಮುಷ್ಕರದಿಂದ ಮುಂದೂಡಲ್ಪಟ್ಟಿತ್ತು. ಕಮೀಷನ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ತೈಲ ಕಂಪನಿಗಳು ಮತ್ತು ಪೆಟ್ರೋಲ್ ಬಂಕ್ ಡೀಲರ್ ಗಳ ನಡುವಿನ ವಿವಾದ ಶುಕ್ರವಾರ ಅಂತ್ಯಗೊಂಡಿದ್ದರಿಂದ ಮರುದಿನವೇ ಬೆಲೆ ಹೆಚ್ಚಳ ನಿರ್ಧಾರ ಹೊರಬಿದ್ದಿದೆ.

ವ್ಯಾಸ ರಚಿತ ಮಹಾಭಾರತ

Related Post

error: Content is protected !!