Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಪೆಟ್ರೋಲ್ ರೂ. 1.12 ಮತ್ತು ಡೀಸೆಲ್ ಬೆಲೆಯಲ್ಲಿ ರೂ.1.24 ಕಡಿತ – News Mirchi

ಪೆಟ್ರೋಲ್ ರೂ. 1.12 ಮತ್ತು ಡೀಸೆಲ್ ಬೆಲೆಯಲ್ಲಿ ರೂ.1.24 ಕಡಿತ

ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ ರೂ. 1.12 ಕಡಿಮೆಯಾಗಲಿದ್ದು, ಡೀಸೆಲ್ ಮೇಲೆ ರೂ.1.24 ಕಡಿತಗೊಳ್ಳಲಿದೆ.

ಇದುವರೆಗೂ ಭಾರತದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರದ ಆಧಾರದ ಮೇಲೆ ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ನಡೆಯುತ್ತಿತ್ತು. ಆದರೆ ನಾಳೆಯಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ನಿತ್ಯ ಪರಿಷ್ಕರಣೆಯಾಗುವ ಪದ್ದತಿ ಜಾರಿಯಾಗಲಿದೆ. ಪ್ರತಿ ನಿತ್ಯ ಪರಿಷ್ಕರಣೆಯಾಗುವ ದರ ಬೆಳಗ್ಗೆ 6 ಗಂಟೆಯಿಂದ ಮರುದಿನ 6 ಗಂಟೆಯವರೆಗೆ ಅನ್ವಯಿಸುತ್ತದೆ. ಈಗಾಗಲೇ ಈ ಹೊಸ ಪದ್ದತಿಯನ್ನು ಪ್ರಾಯೋಗಿಕವಾಗಿ ಐದು ನಗರಗಳಲ್ಲಿ ಮೇ 1 ರಿಂದ ಜಾರಿ ಮಾಡಲಾಗಿದೆ.

Contact for any Electrical Works across Bengaluru

Loading...
error: Content is protected !!