ಮೇ 14 ರಿಂದ ಭಾನುವಾರಗಳಂದು ಪೆಟ್ರೋಲ್ ಬಂಕ್ ಗಳಿಗೆ ರಜೆ – News Mirchi

ಮೇ 14 ರಿಂದ ಭಾನುವಾರಗಳಂದು ಪೆಟ್ರೋಲ್ ಬಂಕ್ ಗಳಿಗೆ ರಜೆ

ಮೇ 14 ರಿಂದ ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್ ಗಳು ಪ್ರತಿ ಭಾನವಾರ ರಜೆ ಪಡೆಯಲಿವೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಮಹಾರಾಷ್ಟ್ರ, ಹರಿಯಾಣಗಳಲ್ಲಿ ಇರುವ ಸುಮಾರು 20 ಸಾವಿರ ಪೆಟ್ರೋಲ್ ಬಂಕ್ ಗಳು ವಾರದಲ್ಲಿ ಒಂದು ದಿನ ಮುಚ್ಚಲಿವೆ ಎಂದು ಇಂಡಿಯನ್ ಪೆಟ್ರೋಲಿಯಂ ಕನ್ಸಾರ್ಷಿಯಂ ಎಗ್ಸಿಕ್ಯುಟೀವ್ ಕಮಿಟಿ ಸದಸ್ಯ ಸುರೇಶ್ ಕುಮಾರ್ ಹೇಳಿದ್ದಾರೆ.

ಭಾನುವಾರಗಳಂದು ಪೆಟ್ರೋಲ್ ಬಂಕ್ ಮುಚ್ಚುವ ಚಿಂತನೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಕುರಿತು ಚಿಂತನೆ ನಡೆದಿತ್ತು. ಆದರೆ ನಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇಂಧನ ಮಾರಾಟ ಕಂಪನಿಗಳು ಮನವಿ ಮಾಡಿದ್ದರಿಂದ ಸುಮ್ಮನಾಗಿದ್ದೆವು, ಈಗ ಅದೇ ನಿರ್ಧಾರವನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಇಂಧನವನ್ನು ಮಿತವಾಗಿ ಬಳಸಬೇಕು ಎಂದು ಇತ್ತೀಚೆಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೀಡಿದ್ದ ಸೂಚನೆ ಮೇರೆಗೆ ಅಸೋಸಿಯೆಷನ್ ಈ ತಿರ್ಮಾನ ಕೈಗೊಂಡಿದೆ ಎಂದು ಅವರು ಹೇಳಿದರು.

Contact for any Electrical Works across Bengaluru

Loading...
error: Content is protected !!