ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಸ್ವೀಕಾರ ಎಂದಿನಂತೆ

ದೇಶಾದ್ಯಂತ ಪೆಟ್ರೋಲ್ ಪಂಪ್ ಗಳು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿಗಳನ್ನು ನಿಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿವೆ. ಬ್ಯಾಂಕುಗಳು ಕಾರ್ಡ್ ಟ್ರಾನ್ಸಾಕ್ಷನ್ ಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾದ ಕಾರಣ ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಪೇಮೆಂಟ್ ಸ್ವೀಕರಿಸದಿರಲು ಈ ಮೊದಲು ನಿರ್ಧರಿಸಲಾಗಿತ್ತು.

ಆದರೆ ಬ್ಯಾಂಕುಗಳು ಸದ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ ನಂತರ ಭಾನುವಾರ ತಡರಾತ್ರಿ ಪೆಟ್ರೋಲಿಯಂ ವಿತರಕರ ಸಂಘ ಈ ನಿರ್ಧಾರದಿಂದ ಹಿಂದೆ ಸರಿದಿವೆ.

ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಖರೀದಿಗೆ ವಿಧಿಸುತ್ತಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್(ಎಂ.ಡಿ.ಆರ್) ಗೆ ವಿನಾಯಿತಿ ನೀಡಿತ್ತು. ಆದರೆ ಸರ್ಕಾರ ಕೇಳಿದ್ದ ಅವಧಿ 50 ದಿನಗಳಾದ ನಂತರ ಬ್ಯಾಂಕುಗಳು ಮತ್ತೆ ಪೆಟ್ರೋಲ್ ಪಂಪ್ ಮಾಲೀಕರಿಗೆ ಶುಲ್ಕವನ್ನು ವಿಧಿಸಲು ಮುಂದಾಗಿದ್ದವು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache