ಇನ್ನು ಮುಂದೆ ಉದ್ಯೋಗ ಬದಲಿಸಿದರೆ, ಪಿಎಫ್ ಖಾತೆ ತನ್ನಿಂತಾನೇ ವರ್ಗಾವಣೆ – News Mirchi

ಇನ್ನು ಮುಂದೆ ಉದ್ಯೋಗ ಬದಲಿಸಿದರೆ, ಪಿಎಫ್ ಖಾತೆ ತನ್ನಿಂತಾನೇ ವರ್ಗಾವಣೆ

ಉದ್ಯೋಗ ಬದಲಿಸಿದಾಗ ವರ್ಗಾವಣೆಯಾಗುವ ಉದ್ಯೋಗಿಯ ಭವಿಷ್ಯ ನಿಧಿ ಖಾತೆಯ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಸ್ವಯಂ ಚಾಲಿತವಾಗಿ ಆಗಲಿದೆ. ವ್ಯಕ್ತಿಯು ತನ್ನ ಉದ್ಯೋಗ ಬದಲಿಸಿದರೆ, ಯಾವುದೇ ಅರ್ಜಿಯಿಲ್ಲದೆ ಆತನ ಭವಿಷ್ಯ ನಿಧಿಯನ್ನು ಮೂರು ದಿನಗಳಲ್ಲಿ ವರ್ಗಾಯಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಭವಿಷ್ಯ ನಿಧಿ ಕಮೀಷನರ್ ವಿ.ಪಿ.ಜಾಯ್ ಹೇಳಿದ್ದಾರೆ.

ಈ ಹಿಂದೆ ಉದ್ಯೋಗ ಬದಲಿಸಿದ ಸಂದರ್ಭಗಳಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಬೇಕಿತ್ತು, ನಂತರ ಉದ್ಯೋಗಿಗಳು ಹೊಸ ಖಾತೆ ತೆರೆಯಬೇಕಿತ್ತು. 2014 ರ ಅಕ್ಟೋಬರ್ ನಲ್ಲಿ ಸರ್ಕಾರ ಯೂನಿರ್ವಸಲ್ ಅಕೌಂಟ್ ನಂಬರ್ ಜಾರಿಗೆ ತಂದ ಮೇಲೆ ವಿವಿಧ ಕಂಪನಿಗಳು ನೀಡುವ ಪಿಎಫ್ ಖಾತೆಗಳನ್ನು ಲಿಂಕ್ ಮಾಡಿದ್ದ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ವರ್ಗಾಯಿಸಿಕೊಳ್ಳುವ ಜವಾಬ್ದಾರಿ ಖಾತೆ ಹೊಂದಿರುವವರದ್ದಾಗಿತ್ತು.

ಆದರೆ ಇನ್ನು ಮುಂದೆ ನಿಮ್ಮ ಪಿ.ಎಫ್ ಖಾತೆಯೇ ಶಾಶ್ವತ ಅಕೌಂಟ್ ನಂಬರ್ ಆಗಲಿದ್ದು, ಬೇರೆಡೆ ಉದ್ಯೋಗಕ್ಕೆ ಸೇರಿದಾಗ ಖಾತೆಗಳನ್ನು ಸ್ಥಗಿತಗೊಳಿಸುವ ಅಗತ್ಯವೂ ಇಲ್ಲ. ಪಿ.ಎಫ್ ಖಾತೆ ವರ್ಗಾವಣೆ ಗೊಂದಲದಿಂದಲೂ ಮುಕ್ತಿ. ಇನ್ನು ಮುಂದೆ ನೌಕರರು ಉದ್ಯೋಗ ಬದಲಿಸಿದ ಸಂದರ್ಭಗಳಲ್ಲಿ, ಪರಿಶೀಲನೆಗೊಳಪಡಿಸಿದ ಆಧಾರ್ ಸಂಖ್ಯೆಯನ್ನು ಹೊಂದಿದ್ದರೆ ಸಾಕು, ಅಂತಹ ನೌಕರರ ಪಿ.ಎಫ್ ಖಾತೆಯು ದೇಶದ ಯಾವುದೇ ಮೂಲೆಗೂ ತನ್ನಿಂತಾನೇ ವರ್ಗಾವಣೆಯಾಗುತ್ತದೆ.

Loading...