ಜೆಎನ್‌ಯು ಕ್ಯಾಂಪಸ್‌ನಲ್ಲಿ ಪಿಸ್ತೂಲು, ಬುಲೆಟ್ ಇದ್ದ ಬ್ಯಾಗ್ ಪತ್ತೆ

ನವದೆಹಲಿ: ದೆಹಲಿಯಲ್ಲಿ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಆವರಣದಲ್ಲಿ ಕಂಡುಬಂದ ಬ್ಯಾಗ್ ಒಂದು ಅತಂಕ ಸೃಷ್ಟಿಸಿದೆ. ಪಿಸ್ತೂಲು, ಬುಲೆಟ್‌ಗಳೊಂದಿಗೆ ಒಂದು ಸ್ಕ್ರೂ ಡ್ರೈವರ್ ಇದ್ದ ಕಪ್ಪು ಬಣ್ಣದ ಬ್ಯಾಗ್ ಸೋಮವಾರ ಬೆಳಗಿನ ಜಾವ 2 ಗಂಟೆಗೆ ಕಂಡುಬಂದಿದ್ದು, ಭದ್ರತಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್ ವಶಪಡಿಸಿಕೊಂಡರು.

ಜೆಎನ್‌ಯು ನ ಎಂಎಎಸ್ಸಿ ಬಯೋಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಅಹ್ಮದ್ ಕೆಲ ದಿನಗಳಿಂದ ನಾಪತ್ತೆಯಾಗಿದ್ದನು. ಹಾಗಾಗಿ ಅಲ್ಲಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಸಿಕ್ಕ ಪಿಸ್ತೂಲ್ ಹೊಂದಿರುವ ಬ್ಯಾಗ್ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿನ ಬದೌನ್ ನ ನಜೀಬ್ ಅಹ್ಮದ್(27) ಅಕ್ಟೋಬರ್ 15 ರಿಂದ ನಾಪತ್ತೆಯಾಗಿದ್ದಾನೆ. ಎಬಿವಿಪಿ ವಿದ್ಯಾರ್ಥಿಗಳೊಂದಿಗಿನ ಜಗಳವೇ ನಾಪತ್ತೆಗೆ ಕಾರಣ ಎಂದು ಕೆಲವರ ಆರೋಪ. ನಜೀಬ್ ತಾಯಿ ಹಾಗೂ ಸಹೋದರಿ ಸಹ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜೊತೆಗೂಡಿದ್ದಾರೆ.