ಸಾಕು ಪ್ರಾಣಿಗಳಿಗೆ ಬಾಂಬ್ ಅಳವಡಿಸಿ ಸ್ಪೋಟ ನಡೆಸಲು ಉಗ್ರರ ಸಂಚು? – News Mirchi

ಸಾಕು ಪ್ರಾಣಿಗಳಿಗೆ ಬಾಂಬ್ ಅಳವಡಿಸಿ ಸ್ಪೋಟ ನಡೆಸಲು ಉಗ್ರರ ಸಂಚು?

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ನಡೆಸಿವೆ. ನೋಟು ರದ್ದು ಪರಿಣಾಮದಿಂದ ಕಂಗೆಟ್ಟಿರುವ ಭಯೋತ್ಪಾದಕ ಸಂಘಟನೆಗಳು, ಕಡಿಮೆ ವೆಚ್ಚದಲ್ಲಿ ಹೆಚ್ಚು ಹಾನಿ ಮಾಡುವ ದಾಳಿಗಳನ್ನು ನಡೆಸಲು ಯೋಜನೆ ರೂಪಿಸಿವೆ. ಹಿಂದಿನ ದಾಳಿಗೆಗಳಿಗೆ ಭಿನ್ನವಾಗಿ ಯಾರಿಗೂ ಅನುಮಾನ ಬಾರದಂತೆ ಸಾಕು ಪ್ರಾಣಿಗಳಿಗೆ ಬಾಂಬುಗಳನ್ನು ಅಳವಡಿಸಿ ಸ್ಪೋಟ ನಡೆಸಲು ಸಂಚು ರೂಪಿಸಿವೆ ಎಂದು ಗುಪ್ತಚರ ದಳಗಳು ಎಚ್ಚರಿಸಿವೆ.

ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಸೇರಿದಂತೆ ಐಸಿಸ್, ಎಕ್ಯೂಐಎಸ್ ನಂತಹ ಅಂತರಾಷ್ಟ್ರೀಯ ಉಗ್ರ ಸಂಘಟನೆಗಳು ಸ್ಪೋಟ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಜನವರಿ 27 ರವರೆಗೂ ಎಚ್ಚರಿಕೆಯಿಂದ ಇರುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ನೋಟು ರದ್ದು ಪರಿಣಾಮದಿಂದ ಸ್ಲೀಪರ್ ಸೆಲ್ಸ್, ಉಗ್ರರ ಪರ ಸಹಾನುಭೂತಿ ಹೊಂದಿರುವವರಿಗೆ ಹಣದ ಹರಿವು ನಿಂತು ಹೋಗಿದೆ, ಹೀಗಾಗಿ ಅವರು ಕಂಗೆಟ್ಟಿದ್ದಾರೆ ಎನ್ನುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಉಗ್ರರಿಗೆ ಅಗತ್ಯವಾದ ಹಣವನ್ನು ಹವಾಲಾ ಮಾರ್ಗದಲ್ಲಿ ಸರಬರಾಜು ಮಾಡಲು ಪಾಕ್ ಪ್ರೇರಿತ ಉಗ್ರ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿವೆ. ಈಗಾಗಲೇ ರೂ.2,000 ಮತ್ತು ರೂ.500 ಹೊಸ ನೋಟುಗಳೊಂದಿಗೆ ರೂ.100 ರ ನೋಟುಗಳನ್ನು ಪಾಕ್, ಬಾಂಗ್ಲಾ ಗಡಿಗಳಲ್ಲಿ ಸಿದ್ಧ ಮಾಡಿಟ್ಟಿವೆ. ಸದ್ಯ ನೆಲೆಸಿರುವ ಪರಿಸ್ಥಿತಿಗಳಲ್ಲಿ ಈ ಹಣವನ್ನು ದೇಶದೊಳಗೆ ಕಳುಹಿಸುವುದು ಕಷ್ಟ. ಹೀಗಾಗಿ ಕಡಿಮೆ ಖರ್ಚಿನಿಂದ ಹೆಚ್ಚು ಸಾವು ನೋವು ಮಾಡುವಂತಹ ದಾಳಿಗಳನ್ನು ನಡೆಸಲು ಉಗ್ರ ಸಂಘಟನೆಗಳು ಮುಂದಾಗಿವೆ ಎನ್ನಲಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಬಂಧಿಸಲಾದ ಉಗ್ರರ ತನಿಖೆ ಮತ್ತು ಇತರ ಮೂಲಗಳಿಂದ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಇದರ ಪ್ರಕಾರ ಸಾಕು ಪ್ರಾಣಿಗಳಿಗೆ ಬಾಂಬುಗಳನ್ನು ಅಳವಡಿಸಿ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಪೋಟ ನಡೆಸಲು ಉಗ್ರರು ತಯಾರಿ ನಡೆಸಿದ್ದಾರೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಪ್ರಮುಖ ಪ್ರದೇಶಗಳಲ್ಲಿ ತಿರುಗಾಡುವ ಸಾಕು ಪ್ರಾಣಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಎಚ್ಚರಿಕೆಯಿಂದ ಇರುವಂತೆ ಎಚ್ಚರಿಸಿದ್ದಾರೆ.

Click for More Interesting News

Loading...

Leave a Reply

Your email address will not be published.

error: Content is protected !!