ಇರಾನ್ ನಲ್ಲಿ ವಿಮಾನ ಪತನ, ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಶಂಕೆ

ಇರಾನ್ ನಲ್ಲಿ ಪ್ರಯಾಣಿಕರ ವಿಮಾನವೊಂದು ಪತನವಾಗಿದೆ. ಏಸ್ ಮ್ಯಾನ್ ಏರ್ ಲೈನ್ಸ್ ನ ವಿಮಾನದಲ್ಲಿ ಸಿಬ್ಬಂದಿ ಸಹಿತ 66 ಜನ ಪ್ರಯಾಣಿಸುತ್ತಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಟೆಹ್ರಾನ್ ನಿಂದ ಯಸೂಜ್ ಗೆ ತೆರಳುತ್ತಿದ್ದ ವಿಮಾನ ಟೇಕಾಫ್ ಆದ ಕೆಲ ಸ್ವಲ್ಪ ಹೊತ್ತಿನಲ್ಲಿಯೇ ರಾಡಾರ್ ಸಂಪರ್ಕದಿಂದ ಕಡಿತಗೊಂಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆಮಿರೋಮ್ ಪ್ರದೇಶದಲ್ಲಿ ವಿಮಾನ ಪತನಗೊಂಡಿರುವುದಾಗಿ ಪತ್ತೆಯಾಗಿದ್ದು, ಅದರಲ್ಲಿನ 60 ಪ್ರಯಾಣಿಕರು, ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ವಿಮಾನ ಸಹಾಯಕರು, ಒಬ್ಬ ಪೈಲಟ್ ಹಾಗೂ ಒಬ್ಬರು ಸಹ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ.

ಹೆಚ್ಚು ಹಳೆಯ ವಿಮಾನಗಳ ಕಾರಣ ಇರಾನ್ ನಲ್ಲಿ ಇತ್ತೀಚೆಗೆ ವಿಮಾನ ಪತನ ಪ್ರಕರಣಗಳ ಹೆಚ್ಚಾಗಿ ವರದಿಯಾಗುತ್ತಿವೆ.

ಏಸ್ ಮ್ಯಾನ್ ವಿಮಾಮಯಾನ ಸಂಸ್ಥೆಯು ಇರಾನಿನ ಮೂರನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಕಳೆದ ವರ್ಷ 30 ಮಧ್ಯಮ ಶ್ರೇಣಿ ವಿಮಾನಗಳ ಖರೀದಿಗಾಗಿ ಬೋಯಿಂಗ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು