ಮೆರ್ಸಲ್ ಚಿತ್ರದಲ್ಲಿ ಬೇಕಂತಲೇ ಸುಳ್ಳು ಪ್ರಚಾರ: ಮದ್ರಾಸ್ ಹೈಕೋರ್ಟಿನಲ್ಲಿ ಪಿಟೀಷನ್ – News Mirchi

ಮೆರ್ಸಲ್ ಚಿತ್ರದಲ್ಲಿ ಬೇಕಂತಲೇ ಸುಳ್ಳು ಪ್ರಚಾರ: ಮದ್ರಾಸ್ ಹೈಕೋರ್ಟಿನಲ್ಲಿ ಪಿಟೀಷನ್

ಚೆನ್ನೈ: ವಿಜಯ್ ಹೀರೋ ಆಗಿ ನಟಿಸಿರುವ ಮೆರ್ಸಲ್ ಚಿತ್ರವನ್ನು ವಿವಾದಗಳ ಕೇಂದ್ರ ಬಿಂದುವಾಗಿದೆ. ಇದೀಗ ಈ ಚಿತ್ರಕ್ಕೆ ಕೇಂದ್ರ ಫಿಲಿಂ ಸರ್ಟಿಫಿಕೇಷನ್ ಬೋರ್ಡ್(ಸಿಬಿಎಫ್ಸಿ) ನೀಡಿರುವ ಸೆನ್ಸಾರ್ ಸರ್ಟಿಫಿಕೇಟ್ ಅನ್ನು ರದ್ದು ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಪಿಟೀಷನ್ ದಾಖಲಾಗಿದೆ. ಆರ್ಥಿಕ ಕ್ಷೇತ್ರದ ಕುರಿತು ಸುಳ್ಳು ಪ್ರಚಾರ ನಡೆಸುತ್ತಿರುವುದಲ್ಲದೆ, ಇತ್ತೀಚೆಗೆ ಜಾರಿಗೆ ತಂದ ಜಿ.ಎಸ್.ಟಿ ಕುರಿತು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅಶ್ವತ್ಥಾಮನ್ ಎಂಬುವವರು ಪಿಟೀಷನ್ ನಲ್ಲಿ ಹೇಳಿದ್ದಾರೆ. [ಇದನ್ನೂ ಓದಿ: ಸಾವು ಬದುಕಿನ ನಡುವೆ ನಕಲಿ ಛಾಪಾ ಕಾಗದ ಹಗರಣದ ರೂವಾರಿ]

ಈ ಚಿತ್ರ ಬಿಡುಗಡೆಗೆ ಸಿಬಿಎಫ್ಸಿ ಅದು ಹೇಗೆ ಅನುಮತಿ ನೀಡಿತು ಅಶ್ವತ್ಥಾಮನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಚಿತ್ರದ ತುಂಬೆಲ್ಲಾ ದೇಶದ ಕುರಿತು ತಪ್ಪಾಗಿ ತೋರಿಸಲಾಗಿದೆ. ಜಿಎಸ್ಟಿ ಕುರಿತು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಫೇಕ್ ಸಂಭಾಷಣೆಗಳು, ದೃಶ್ಯಗಳು ಚಿತ್ರದಲ್ಲಿವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಲಿಕ್ ಮಾಡಿ: ಈ ಗೂಗಲ್ ಆಪ್ ಡೌನ್ಲೋಡ್ ಮಾಡಿ ಹಣ ಗಳಿಸುವುದು ಹೇಗೆ ಗೊತ್ತಾ?

ಅಸಲಿಗೆ ಜಿಎಸ್ಟಿ ಕುರಿತು ಚಿತ್ರದಲ್ಲಿ ಪ್ರಸ್ತಾಪಿಸುವ ಸಂದರ್ಭವೇ ಇರಲಿಲ್ಲ. ಉದ್ದೇಶಪೂರ್ವಕವಾಗಿ ಅವುಗಳನ್ನು ಕೊನೆಯಲ್ಲಿ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇಂತಹ ಸುಳ್ಳು ಪ್ರಚಾರದಿಂದ ಯುವಕರು ದಾರಿ ತಪ್ಪುವ ಸಾಧ್ಯತೆಯಿದೆ, ಇಂತಹ ಚಿತ್ರಗಳಿಗೆ ಸಿಬಿಎಫ್ಸಿ ಅನುಮತಿ ನೀಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...