ಇಂದು ಮಧ್ಯರಾತ್ರಿಯಿಂದ 500, 1000 ನೋಟು ಚಲಾವಣೆ ರದ್ದು |News Mirchi

ಇಂದು ಮಧ್ಯರಾತ್ರಿಯಿಂದ 500, 1000 ನೋಟು ಚಲಾವಣೆ ರದ್ದು

ಭಾರತ ಸರ್ಕಾರ ಪ್ರಮುಖ ತೀರ್ಮಾನವೊಂದನ್ನು ಕೈಗೊಂಡಿದೆ. ಇಂದು ಮಧ್ಯರಾತ್ರಿಯಿಂದ ರೂ.500 ಮತ್ತು ರೂ. 1000 ನೋಟುಗಳನ್ನು ರದ್ದುಗೊಳಿಸುತ್ತಿರುವುದಾಗಿ ಪ್ರಕಟಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಸ್ವತಃ ಈ ಪ್ರಕಟಣೆ ಮಾಡಿದ್ದಾರೆ.

ಮಂಗಳವಾರ ರಾತ್ರಿ ರಾಷ್ಟ್ರದ ಜನತೆಯನ್ನುದ್ದೇಶಿಸಿ ಅವರು ಭಾಷಣ ಮಾಡಿದರು. ಮಂಗಳವಾರ ಮಧ್ಯರಾತ್ರಿಯಿಂದ ರೂ. 500, ರೂ. 1000 ನೋಟು ಚಲಾವಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ದೇಶದಲ್ಲಿ ಅಡಗಿಸಿರುವ ಕಪ್ಪು ಹಣವನ್ನು ನಿಯಂತ್ರಿಸಲು ಈ ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು. ಜನರ ಬಳಿ ಇರುವ ರೂ. 1000 ಮತ್ತು ರೂ. 500 ನೋಟುಗಳನ್ನು ಬದಲಾಯಿಸಿಕೊಳ್ಳಲು ಡಿಸೆಂಬರ್ 30 ರವರೆಗೂ ಕಾಲಾವಕಾಶ ನೀಡಿದ್ದಾರೆ. ಅಷ್ಟರೊಳಗೆ ಅಂಚೆ ಕಛೇರಿ, ಬ್ಯಾಂಕ್‌ಗಳಲ್ಲಿ ನೋಟು ಬದಲಾಯಿಸಿಕೊಳ್ಳಲು ಸೂಚಿಸಿದರು.

ಈ ಸಂದರ್ಭದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಗೆ ಬದ್ದರಾಗಿದ್ದೆವೆ ಎಂದು ಹೇಳಿದರು. ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ಉತ್ತಮ ಸ್ಥಾನ ಗಳಿಸಿದೆ ಎಂದರು. ಈ ಸರ್ಕಾರ ಬಡವರ ಪರ, ಎಂದಿಗೂ ಹೀಗೇ ಇರುತ್ತದೆ ಎಂದು ಹೇಳಿದರು.

Loading...
loading...
error: Content is protected !!