ಮತದಾನದ ಹಕ್ಕು ಚಲಾಯಿಸಿದ ಮೋದಿ |News Mirchi

ಮತದಾನದ ಹಕ್ಕು ಚಲಾಯಿಸಿದ ಮೋದಿ

ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಅಂತಿಮ ಹಂತದ ಮತದಾನದಲ್ಲಿ ಅಹಮದಾಬಾದ್ ನ ರನಿಪ್ ನಲ್ಲಿ ಅವರು ಮತದಾನ ಮಾಡಿದರು.

ಗುರುವಾರ ಬೆಳಗ್ಗೆಯೇ ಮುಂಬೈನಲ್ಲಿ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿಯನ್ನು ರಾಷ್ಟ್ರಕ್ಕೆ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ, ಅಲ್ಲಿಂದ ನೇರವಾಗಿ ಮಧ್ಯಾಹ್ನ 12 ಗಂಟೆಗೆ ಅಹಮದಾಬಾದ್ ತಲುಪಿದರು. ಅಲ್ಲಿಂದ ಕಾರಿನಲ್ಲಿ ಮತದಾನ ಕೇಂದ್ರಕ್ಕೆ ತಲುಪಿ ಮತ ಹಾಕಿದರು.

ಐಎನ್ಎಸ್ ಕಲ್ವರಿಯನ್ನು ದೇಶಕ್ಕೆ ಅರ್ಪಿಸಿದ ಪ್ರಧಾನಿ

ಮೋದಿಯವರು ಮತದಾನ ಕೇಂದ್ರಕ್ಕೆ ಆಗಮಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅಸಂಖ್ಯಾತ ಅಬಿಮಾನಿಗಳು, ಮಾಧ್ಯಮಗಳು ಅಲ್ಲಿ ಸೇರಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ಮತದಾನ ಮಾಡಿರುವುದಾಗ ತಮ್ಮ ಬೆರಳನ್ನು ತೋರಿಸುತ್ತಾ ಮೋದಿಯವರು ನಡೆಯುತ್ತಾ ಮುಂದೆ ಸಾಗಿದರು. ಮೋದಿಯವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಸಮೀಪದ ಮನೆ, ಕಟ್ಟಡಗಳ ಮೇಲೆ ಹತ್ತಿ ಅವರನ್ನು ನೋಡಿ ಸಂಭ್ರಮಿಸಿದರು.

ಗುಜರಾತ್ ನಲ್ಲಿ 182 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 89 ಕ್ಷೇತ್ರಗಳಿಗೆ ಡಿಸೆಂಬರ್ 9 ರಂದು ಮತದಾನವಾಗಿತ್ತು. ಎರಡನೇ ಹಾಗೂ ಅಂತಿಮ ಹಂತದಲ್ಲಿ 93 ಕ್ಷೇತ್ರಗಳಿಗೆ ಇಂದು ಮತದಾನವಾಗುತ್ತಿದೆ. ಕಳೆದ 20 ವರ್ಷಗಳಿಂದಲೂ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!