ಭಾರತ ಇಸ್ರೇಲ್ ಸಂಬಂಧವನ್ನು “ಐ ಫಾರ್ ಐ” ಎಂದು ಬಣ್ಣಿಸಿದ ಮೋದಿ – News Mirchi

ಭಾರತ ಇಸ್ರೇಲ್ ಸಂಬಂಧವನ್ನು “ಐ ಫಾರ್ ಐ” ಎಂದು ಬಣ್ಣಿಸಿದ ಮೋದಿ

ಪ್ರತಿಯೊಂದು ಯೋಜನೆಗಳಲ್ಲೂ ಪ್ರತಿ ಅಕ್ಷರಕ್ಕೂ ಒಂದು ಅರ್ಥ ಕೊಟ್ಟು ಬಣ್ಣಿಸುವ ಮೋದಿ, ಇಸ್ರೇಲ್ ನಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. ಭಾರತ ಇಸ್ರೇಲ್ ನಡುವಿನ ಸಂಬಂಧವನ್ನು “ಐ ಫಾರ್ ಐ” ಎಂದು ಬಣ್ಣಿಸಿದರು. ಅಂದರೆ ಇಂಡಿಯಾ ಫಾರ್ ಇಸ್ರೇಲ್, ಇಸ್ರೇಲ್ ಫಾರ್ ಇಂಡಿಯಾ ಎಂದು ಅವರು ವಿವರಿಸಿದರು.

ಭಾರತದ ಪ್ರಧಾನಿ ಇಸ್ರೇಲ್ ಪ್ರವಾಸದಲ್ಲಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬುಧವಾರ ಅವರು ಇಸ್ರೇಲ್ ಅಧ್ಯಕ್ಷ ರೂವೆನ್ ರವ್ಲಿನ್ ಅವರನ್ನು ಭೇಟಿ ಮಾಡಿದರು. ಅಧ್ಯಕ್ಷ ಭವನದಲ್ಲಿ ಮೋದಿಗೆ ಕೆಂಪು ಹಾಸಿನ ಸ್ವಾಗತ ದೊರೆಯಿತು. “ಅಧ್ಯಕ್ಷ ರೂವೆನ್ ಸಂಪ್ರದಾಯಗಳನ್ನು ಪಕ್ಕಕ್ಕಿಟ್ಟು, ಹೃದಯಪೂರ್ವಕವಾಗಿ ಮೋದಿಯವರನ್ನು ಸ್ವಾಗತಿಸಿದರು. ಭಾರತೀಯ ಪ್ರಜೆಗಳಿಗೆ ಸಿಗುತ್ತಿರುವ ಗೌರವಕ್ಕೆ ಇದೇ ಸಾಕ್ಷಿ” ಎಂದು ಮೋದಿ ಟ್ವೀಟ್ ಮಾಡಿದರು. ಇಸ್ರೇಲ್ ಅಧ್ಯಕ್ಷರನ್ನು ಭೇಟಿಯಾಗಿದ್ದು ಹೆಮ್ಮೆಯಾಗಿ ಭಾವಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಭಾರತದಲ್ಲಿ ತಮ್ಮ ಪ್ರವಾಸವನ್ನು ಎಂದಿಗೂ ಮರೆಯುವುದಿಲ್ಲ, ಅದೊಂದು ಅವಿಸ್ಮರಣೀಯ ಎಂದು ರೂವೆನ್ ನೆನಪಿಸಿಕೊಂಡರು. ನಂತರ ಉಭಯ ನಾಯಕರು ದ್ವಿಪಕ್ಷೀಯ ಚರ್ಚೆಗಳಲ್ಲಿ ಪಾಲ್ಗೊಂಡರು. ಮೋದಿ ತಮ್ಮ ಪ್ರವಾಸದ ಭಾಗವಾಗಿ ಮುಂಬೈ ಸ್ಪೋಟಗಳಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಮಗು ಮೊಷೇಯನ್ನು ಭೇಟಿ ಮಾಡಿದರು.

Contact for any Electrical Works across Bengaluru

Loading...
error: Content is protected !!