ಮತ್ತೊಮ್ಮೆ ವಿಶ್ವದ ಗಮನ ಸೆಳೆಯಲಿದ್ದಾರೆ ಮೋದಿ

ವಿಶ್ವ ಆರ್ಥಿಕ ವೇದಿಕೆ(ವರ್ಲ್ಡ್ ಎಕನಾಮಿಕ್ ಫೋರಂ)ಯಲ್ಲಿ ವಿಶ್ವಕ್ಕೆ ಹೇಳಲು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಅದ್ಭುತ ವಿಷಯವಿದೆ, ಅದು ಭಾರತದ ಕಡೆ ವಿಶ್ವದ ದೇಶಗಳನ್ನು ಆಕರ್ಷಿಸುತ್ತದೆ ಎಂದು ಸ್ಪೈಸ್ ಜೆಟ್ ಮುಖ್ಯಸ್ಥ ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಷಯವನ್ನು ಮೋದಿಯವರಲ್ಲದೆ ಬೇರೆ ಯಾರಿಗೂ ಅಷ್ಟು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ. ಮೋದಿ ಅವಧಿಯಲ್ಲಿ ಮಹತ್ವಾಕಾಂಕ್ಷೆಯಿಂದ ತಂದ ಸುಧಾರಣಾ ಕ್ರಮಗಳಾದ ಜಿ.ಎಸ್.ಟಿ, ಡಿಜಿಟಲೈಸೇಷನ್, ದೊಡ್ಡ ನೋಟು ರದ್ದು ಕ್ರಮಗಳಂತಹ ವಿಷಯಗಳನ್ನೂ ಅವರು ವಿಶ್ವ ವೇದಿಕೆಯಲ್ಲಿ ವಿವರಿಸಲಿದ್ದಾರೆ.

ವಿಶ್ವದಲ್ಲಿ ಬೇರೆ ಯಾರಿಗೂ ಇಲ್ಲದಂತಹ ಅವಕಾಶ ಮೋದಿಯವರಿಗಿದ್ದು, ಅವರು ಮತ್ತೊಮ್ಮೆ ವಿಶ್ವದ ಎಲ್ಲಾ ದೇಶಗಳ ಗಮನವನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಭಾರತ, 1.4 ಬಿಲಿಯನ್ ಭಾರತೀಯರು, ಯುವಕರ ಸಂಖ್ಯೆ, ವಿಶ್ವಕ್ಕೆ ದೊಡ್ಡ ಮಾರುಕಟ್ಟೆಯಾಗಿರುವ ಭಾರತ ಮುಂತಾದ ಅಂಶಗಳನ್ನೂ ಮೋದಿ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ನಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಅವರು ಹೇಳಿದರು. ಸುಮಾರು 20 ವರ್ಷಗಳ ನಂತರ ಭಾರತದ ಪ್ರಧಾನಿ ಈ ಸಮಾವೇಶದಲ್ಲಿ ಭಾಗವಹಿಸುತ್ತಿರುವುದರಿಂದ ಭಾರತಕ್ಕೆ ಇದು ಅತ್ಯಂತ ಮಹತ್ವದ ಸಮಾವೇಶವಾಗಿದೆ.

ಅಂದು ದೇವೇಗೌಡ, ಇಂದು ಮೋದಿ

ಕಳೆದ ವರ್ಷ ಜಿನ್ ಪಿಂಗ್ ರವರನ್ನು ನೋಡಿದಾಗ ಎಲ್ಲರ ಗಮನ ಚೀನಾ ಮೇಲಿತ್ತು. ಆದರೆ ಈ ಬಾರಿ ಪ್ರಪಂಚದ ಗಮನವೆಲ್ಲಾ ಭಾರತದ ಮೇಲಿರುತ್ತದೆ ಎಂದು ಅಜಯ್ ಸಿಂಗ್ ಹೇಳಿದ್ದಾರೆ. ಸ್ವಿಡ್ಜರ್ಲೆಂಡ್ ನಲ್ಲಿನ ದಾವೋಸ್ ನಲ್ಲಿ ಸೋಮವಾರ ಆರಂವಾಗುತ್ತಿರುವ ಫೋರಂನಲ್ಲಿ ಮಂಗಳವಾರ ಮೋದಿ ಭಾಷಣ ಮಾಡಲಿದ್ದಾರೆ. 1997 ರಲ್ಲಿ ಅಂದಿನ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಪಾಲ್ಗೊಂಡಿದ್ದರು. ಅದಾದ ನಂತರ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ವಿಶ್ವ ಆರ್ಥಿಕ ವೇದಿಯಕಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Get Latest updates on WhatsApp. Send ‘Subscribe’ to 8550851559