ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಂಕುಸ್ಥಾಪನೆ

ಅರಬ್ ರಾಜಧಾನಿ ಅಬುದಾಬಿಯಲ್ಲಿ ನಿರ್ಮಾಣಗೊಳ್ಳಲಿರುವ ಮೊದಲ ಹಿಂದೂ ದೇವಾಲಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಅಬುದಾಬಿಯಲ್ಲಿ 55 ಸಾವಿರ ಚ.ಮೀ ವಿಸ್ತೀರ್ಣದಲ್ಲಿ ಮೊಟ್ಟ ಮೊದಲ ಹಿಂದೂ ದೇವಾಲಯ ನಿರ್ಮಾಣವಾಗುತ್ತಿದೆ.

mod

ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಮುದಾಯವನ್ನುದ್ದೇಶಿಸಿ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಕಾರ್ಯಕ್ರಮ ದುಬೈನ ಒಪೇರಾ ಹೌಸ್ ನಿಂದ ನೇರ ಪ್ರಸಾರವಾಯಿತು. ದೇವಾಲಯದ ನಿರ್ಮಾಣಕ್ಕಾಗಿ 125 ಕೋಟಿ ಭಾರತೀಯರ ಪರವಾಗಿ ಪ್ರಧಾನಿ ಮೋದಿ ಅಬುದಾಬಿ ದೊರೆ ಮೊಹಮದ್ ಬಿನ್ ಝಾಯೀದ್ ಅಲ್ ನಹ್ಯಾನ್ ಗೆ ಧನ್ಯವಾದಗಳನ್ನು ತಿಳಿಸಿದರು.

ಸಿಪಿಎಂ ಗೂಂಡಾಗಳಿಂದ ಕಾಪಾಡಿ ಎಂದು ಕೇಳಿಕೊಳ್ಳುತ್ತಿರುವ ಬಿಜೆಪಿ ಮುಖಂಡನ ಪುತ್ರಿ

ಈ ದೇವಾಲಯ ಕೇವಲ ವಾಸ್ತುಶಿಲ್ಪದಿಂದ ಮಾತ್ರ ವಿಶಿಷ್ಟವಾಗಿ ನಿಲ್ಲುವುದಿಲ್ಲ, ‘ವಸುದೈವ ಕುಟುಂಬಕಂ’ ಎಂಬ ಸಂದೇಶವನ್ನು ವಿಶ್ವಾದ್ಯಂತ ಇರುವ ಜನರಿಗೆ ಸಾರಿ ಹೇಳುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು. 2015 ರ ನಂತರ ಅರಬ್ ದೇಶಗಳಿಗೆ ಮೋದಿ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ.

55 ಸಾವಿರ ಚ.ಮೀ ವಿಸ್ತೀರ್ಣ

ಅಬುಧಾಬಿಯಲ್ಲಿ ಸುಮಾರು 55 ಸಾವಿರ ಚ.ಮೀ ವಿಸ್ತೀರ್ಣದಲ್ಲಿ ಹಿಂದೂ ದೇವಾಲಯ ನಿರ್ಮಾಣಗೊಳ್ಳಲಿದೆ. ಈ ದೇಗುಲವನ್ನು ಭಾರತೀಯ ದೇಗುಲಗಳ ಕುಶಲಕರ್ಮಿಗಳಿಂದ ಕೆತ್ತಿಸಲಾಗುತ್ತದೆ. ನಂತರ ಅರಬ್ ರಾಷ್ಟ್ರದಲ್ಲಿ ಜೋಡಿಸಲಾಗುತ್ತದೆ. 2020 ರ ವೇಳೆಗೆ ಈ ದೇಗುಲದ ನಿರ್ಮಾಣ ಕಾರ್ಯಕ ಪೂರ್ಣಗೊಳ್ಳಲಿದ್ದು, ಎಲ್ಲಾ ಧಾರ್ಮಿಕ ಹಿನ್ನೆಲೆ ಜನರಿಗೆ ಮುಕ್ತ ಪ್ರವೇಶವಿರಲಿದೆ. ಮಧ್ಯಪ್ರಾಚ್ಯದಲ್ಲಿ ಕಲ್ಲಿನಿಂದ ನಿರ್ಮಾಣವಾಗುತ್ತಿರುವ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯ ಎಂಬ ಗರಿಮೆಗೂ ಇದು ಪಾತ್ರವಾಗಲಿದೆ.

Get Latest updates on WhatsApp. Send ‘Subscribe’ to 8550851559