ಏಪ್ರಿಲ್ 3 ರಂದು ದೇಶದ ಅತಿ ಉದ್ದದ ಸುರಂಗ ಮಾರ್ಗ ಆರಂಭ – News Mirchi
We are updating the website...

ಏಪ್ರಿಲ್ 3 ರಂದು ದೇಶದ ಅತಿ ಉದ್ದದ ಸುರಂಗ ಮಾರ್ಗ ಆರಂಭ

ಜಮ್ಮು: ಭಾರತ ದೇಶದಲ್ಲಿಯೇ ಅತಿ ಉದ್ದವಾದ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ. ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿದ “ಚೆನಾನೀ ನಾಶ್ರಿ” ಸುರಂಗ ಮಾರ್ಗವನ್ನು ಏಪ್ರಿಲ್ 2 ರಂದು ಪ್ರಾರಂಭಿಸಿ ದೇಶಕ್ಕೆ ಅರ್ಪಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಬುಧವಾರ ಪ್ರಕಟಿಸಿದೆ. ಈ ಹೆದ್ದಾರಿ ಮೂಲಕ‌ ಜಮ್ಮು-ಶ್ರೀನಗರ ನಡುವೆ ಸುಮಾರು 30 ಕಿಲೋ ಮೀಟರ್ ಅಂತರ ಕಡಿಮೆಯಾಗಲಿದೆ. ಈ ಸುರಂಗ ಮಾರ್ಗವನ್ನು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ನಿರ್ಮಿಸಿದೆ. ಇದರ ನಿರ್ಮಾಣ 2011 ಮೇ 23 ರಂದು ಆರಂಭವಾಗಿತ್ತು.

286 ಕಿಲೋ ಮೀಟರ್ ವರೆಗೂ ನಾಲ್ಕು ಲೇನ್ ಗಳನ್ನು ನಿರ್ಮಿಸಿದ ಈ ಹೆದ್ದಾರಿ ಮೇಲೆ 9.2 ಕಿಲೋ ಮೀಟರ್ ಸುರಂಗ ಮಾರ್ಗವನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ರೂ.3,720 ಕೋಟಿ ವೆಚ್ಚ ಮಾಡಿದ್ದಾರೆ. ಸಮುದ್ರ ಮಟ್ಟಕ್ಕಿಂತ 1200 ಮೀಟರ್ ಎತ್ತರದಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಿರುವುದು ವಿಶೇಷ. ಈ ಮಾರ್ಗದಲ್ಲಿ ಅಪಘಾತಗಳಿಗೆ ಅವಕಾಶವಿಲ್ಲದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸ ನಿರ್ಮಿಸಲಾಗಿದೆ. ಸುರಂಗ ಮಾರ್ಗದಲ್ಲಿ ಏನೇ ಅಪಘಾತವಾಗ ವಾಹನಗಳಿಗೆ ಬೆಂಕಿ ಹೊತ್ತಿಕೊಂಡರೆ ಆಟೋಮ್ಯಾಟಿಕ್ ಆಗಿ ನಂದಿಸುವ ಯಂತ್ರಗಳನ್ನು ಸಿದ್ಧವಾಗಿಟ್ಟಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!