ಜುಲೈ 4 ರಿಂದ ಪ್ರಧಾನಿ ಇಸ್ರೇಲ್ ಟೂರ್, ಕಾದಿದೆ ಅಪರೂಪದ ಗೌರವ – News Mirchi
We are updating the website...

ಜುಲೈ 4 ರಿಂದ ಪ್ರಧಾನಿ ಇಸ್ರೇಲ್ ಟೂರ್, ಕಾದಿದೆ ಅಪರೂಪದ ಗೌರವ

ಜುಲೈ 4 ರಿಂದ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದು, ಮೋದಿ ಭೇಟಿಗೆ ಇಸ್ರೇಲ್ ಹೆಚ್ಚು ಮಹತ್ವ ನೀಡುತ್ತಿದೆ. ವಿಮಾನ ನಿಲ್ದಾಣದಲ್ಲಿ ಭಾರತದ ಪ್ರಧಾನಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಆ ದೇಶದ ವಿವಿಧ ಕ್ಷೇತ್ರಗಳ ಪ್ರಮುಖರ ಉನ್ನತ ಮಟ್ಟದ ತಂಡ ಸ್ವಾಗತಿಸಲಿದೆ. ನಿಯಮಗಳ ಪ್ರಕಾರ ಇಸ್ರೇಲ್ ನಲ್ಲಿ ಈ ಅಪರೂಪದ ಗೌರವ ಪೋಪ್ ಮತ್ತು ಅಮೆರಿಕದ ಅಧ್ಯಕ್ಷರಿಗೆ ಮಾತ್ರ ನೀಡಲಾಗುತ್ತದೆ. ಅಪರೂಪಕ್ಕೆ ಈ ಸಂಪ್ರದಾಯವನ್ನು ಮೀರಿ ಭಾರತದ ಪ್ರಧಾನಿಗೆ ಈ ಗೌರವ ಸಿಗಲಿದೆ.

ಇಸ್ರೇಲ್ ರಾಯಭಾರಿ ಡೇನಿಯಲ್ ಕಾರ್ಮನ್ ಬುಧವಾರ ಮಾಧ್ಯಮಗಳಿಗೆ ಈ ವಿಷಯವನ್ನು ತಿಳಿಸಿದರು. ಮೋದಿ ಗೌರವಾರ್ಥ ಜುಲೈ 4 ರಂದು ತಮ್ಮ ಪ್ರಧಾನಿ ಔತಣಕೂಟ ಏರ್ಪಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೋದಿ ಇಸ್ರೇಲ್ ಪ್ರವಾಸ, ಭಾರತ ಮತ್ತು ಇಸ್ರೇಲ್ ತಮ್ಮ ಸಂಬಂಧಗಳನ್ನು ವ್ಯೂಹಾತ್ಮಕ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಹೊಸ ಹೊಸ ಸಂಶೋಧನೆಗಳು, ಅಭಿವೃದ್ಧಿ, ವಿಜ್ಞಾನ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿ ಅನೇಕ ಒಪ್ಪಂದಗಳೂ ಮಾಡಿಕೊಳ್ಳಲಿವೆ ಎಂದು ಭಾವಿಸಲಾಗುತ್ತಿದೆ.

ಗಂಗಾ ನದಿ ಸ್ವಚ್ಛಗೊಳಿಸುವ ಸಂಬಂಧ ಉತ್ತರಪ್ರದೇಶ ಮತ್ತು ಇಸ್ರೇಲ್ ನಡುವೆ ಒಪ್ಪಂದವಾಗುವ ಸಾಧ್ಯತೆ ಇದೆ. ನಾಲ್ಕು ಕೋಟಿ ಡಾಲರ್ ಮೊತ್ತದ ಕೈಗಾರಿಕಾ ಸಂಶೋಧನೆ, ಅಭಿವೃದ್ಧಿ ನಿಧಿ ರಚನೆ ಕುರಿತೂ ಒಪ್ಪಂದವಾಗಬಹುದು ಎನ್ನಲಾಗುತ್ತಿದೆ. ಮೋದಿ ಪ್ರವಸಕ್ಕೆ ಇಸ್ರೇಲ್ ಮಾಧ್ಯಮ ಹೆಚ್ಚು ಪ್ರಾಮುಖ್ಯತೆ ನೀಡಿದೆ.

Contact for any Electrical Works across Bengaluru

Loading...
error: Content is protected !!