ಮೋದಿಯವರದ್ದು ಹುಲಿ ಮೇಲಿನ ಸವಾರಿ: ನಿತೀಶ್

ಪಾಟ್ನಾ: ದೇಶದಲ್ಲಿರುವ ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಗರಿಷ್ಟ ಮುಖಬೆಲೆಯ ನೋಟು ರದ್ದುಗೊಳಿಸಿದ ಪ್ರಧಾನ ಮಂತ್ರಿ ತೀರ್ಮಾನವನ್ನು ಬಿಹಾರ ಮುಖ್ಯಮಂತ್ರಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಮಂತ್ರಿ ಈಗ ಹುಲಿಯ ಮೇಲೆ ಸವಾರಿ ಮಾಡುತ್ತಿದ್ದಾರೆ, ತೆಗೆದುಕೊಂಡ ತೀರ್ಮಾನ ಅವರ ಮಿತ್ರ ಪಕ್ಷಗಳಲ್ಲೇ ಭಿನ್ನಾಭಿಪ್ರಾಯ ತರುವಂತೆ ಮಾಡಿದೆ. ಆದರೆ ತೀರ್ಮಾನಕ್ಕೆ ಪ್ರಜೆಗಳಲ್ಲಿ ಸೆಂಟಿಮೆಂಟ್ ಸೃಷ್ಟಿಯಾಗಿದೆ. ಇದನ್ನು ನಾವೂ ಗೌರವಿಸಬೇಕು ಎಂದು ಪಕ್ಷದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ನಿತೀಶ್ ಹೇಳಿದ್ದಾರೆ.

ಆದರೆ ಜನ ಅನುಭವಿಸುತ್ತಿರುವ ನೋಟು ಬದಲಾವಣೆ ಸಂಕಷ್ಟವನ್ನು ಕೇಂದ್ರದ ಗಮನಕ್ಕೆ ತರಲು ಹಿಂಜರಿಯುವುದಿಲ್ಲ ಎಂದು ನಿತೀಶ್ ಹೇಳಿದರು. ಕಪ್ಪು ಹಣಕ್ಕೆ ಕಡಿವಾಣ ಹಾಕಲು, ಬೇನಾಮಿಗಳ ವಿರುದ್ಧ ಪ್ರಧಾನಿ ತೆಗೆದುಕೊಳ್ಳುವ ಕ್ರಮಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.

Related News

loading...
error: Content is protected !!