ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಮೋದಿಯಿಂದ ಅಪ್ಪುಗೆಯ ಸ್ವಾಗತ – News Mirchi

ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಮೋದಿಯಿಂದ ಅಪ್ಪುಗೆಯ ಸ್ವಾಗತ

ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ 2 ದಿನಗಳ ಭಾರತದ ಪ್ರವಾಸ ಕೈಗೊಂಡಿದ್ದು, ಬುಧವಾರ ಭಾರತಕ್ಕೆ ಆಗಮಿಸಿದರು. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಂದಿನ ಶೈಲಿಯಲ್ಲಿ ಅಬೆ ಅವರನ್ನು  ಅಪ್ಪುಗೆಯ ಮೂಲಕ ಸ್ವಾಗತಿಸಿದರು. ಶಿಂಜೋ ಅಬೆ ಸತಿ ಸಮೇತರಾಗಿ ವಿಶೇಷ ವಿಮಾನದಲ್ಲಿ ಗುಜರಾತ್ ತಲುಪಿದರು.

ಸೇನಾ ಗೌರವ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರೋಡ್ ಶೋ ನಲ್ಲಿ ಅಬೇ ಪಾಲ್ಗೊಂಡರು. ಮೋದಿಯವರೊಂದಿಗೆ ಅವರು ಸಬರಮತಿ ಆಶ್ರಮ ಸೇರಿದಂತೆ ಸಿದ್ದಿ ಸಯ್ಯದ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಹಾಗೆಯೇ ಗುರುವಾರ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಅಹಮದಾಬಾದ್ – ಮುಂಬೈ ನಡುವಿನ ಮೊದಲ ಬುಲೆಟ್ ರೈಲು ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಿಂಜೋ ಅಬೆ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಭದ್ರತೆಗಾಗಿ ನಗರದ ಪೊಲೀಸ್ ಸಿಬ್ಬಂದಿ ಜೊತೆ ಇತರೆ ಪ್ರದೇಶಗಳ ಪೊಲೀಸರನ್ನೂ ನಿಯೋಜಿಸಲಾಗಿತ್ತು. ರಾಜ್ಯ ರಿಸರ್ವ್ ಪೊಲೀಸ್ ನ 12 ಕಂಪನಿಗಳು ಪಡೆಗಳು ಸೇರಿದಂತೆ ಬಾಂಬ್ ಸ್ಕ್ವಾಡ್, ಕ್ವಿಕ್ ರೆಸ್ಪಾನ್ಸ್ ಟೀಮ್, ಎನ್.ಎಸ್.ಜಿ ಕಮಾಂಡೋ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

Get Latest updates on WhatsApp. Send ‘Add Me’ to 8550851559

Loading...