ಪುಸ್ತಕ ಬಿಡುಗಡೆ ಮಾಡಿದ ಮೋದಿ ಪ್ಯಾಕಿಂಗ್ ಕವರ್ ಏನು ಮಾಡಿದರು ಗೊತ್ತೇ? – News Mirchi

ಪುಸ್ತಕ ಬಿಡುಗಡೆ ಮಾಡಿದ ಮೋದಿ ಪ್ಯಾಕಿಂಗ್ ಕವರ್ ಏನು ಮಾಡಿದರು ಗೊತ್ತೇ?

ಸ್ವಚ್ಛ ಭಾರತ ಅಭಿಯಾನಕ್ಕೆ ಮುನ್ನುಡಿ ಬರೆದ ಪ್ರಧಾನಿ ಮೋದಿಯವರು ಕೇವಲ ಇತರರಿಗಷ್ಟೇ ಅದನ್ನು ಬೋಧಿಸುತ್ತಿಲ್ಲ, ಬದಲಿಗೆ ತಾವೂ ಅದನ್ನು ಪಾಲಿಸುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಒಂದು ಸಣ್ಣ ಉದಾಹರಣೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ರಚಿಸಿದ ಮಾತೋಶ್ರೀ ಪುಸ್ತಕವನ್ನು ಮೋದಿ ಬಿಡುಗಡೆ ಮಾಡಿದರು. ಬೇರೆ ಯಾರಾದರೂ ಆಗಿದ್ದರೆ ಪುಸ್ತಕ ಪ್ಯಾಕ್ ಮಾಡಿದ ಕವರ್ ಕಡೆ ಗಮನ ಕೊಡದೆ ಕಿತ್ತು ಅಲ್ಲೇ ಬಿಸಾಡುತ್ತಿದ್ದರು. ಆದರೆ ಪ್ರಧಾನಿ ಈ ಪುಸ್ತಕವನ್ನು ಪ್ಯಾಕ್ ಮಾಡಲಾಗಿದ್ದ ಕವರ್ ಮತ್ತು ರಿಬ್ಬನ್ ಅನ್ನು ತೆಗೆದು ಕೆಳಗೆ ಎಸೆಯದೆ ನೇರವಾಗಿ ತಮ್ಮ ಜೇಬಿಗೆ ಸೇರಿಸಿದರು.[ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೀಸಲಾತಿಗೆ ಬ್ರೇಕ್ ಹಾಕಿದ ಯೋಗಿ]

ಇದನ್ನು ನೋಡಿದ ಸುಮಿತ್ರಾ ಮಹಾಜನ್ ಮತ್ತು ಮತ್ತು ವೇದಿಕೆಯ ಮೇಲಿದ್ದ ಇತರರು ಒಂದು ಕ್ಷಣ ಆಶ್ಚರ್ಯಗೊಂಡರು. ಪ್ರಧಾನಿ ಮೋದಿಯವರು ಸ್ವಚ್ಛ ಭಾರತದ ಕುರಿತು ಕೇವಲ ಘೋಷಣೆಯಲ್ಲ, ಅದನ್ನು ಪಾಲಿಸುತ್ತಿರುವುದಕ್ಕೆ ಚಪ್ಪಾಳೆ ತಟ್ಟಿ ಅಭಿನಂಧಿಸಿದರು.

Loading...