ಇಂದು ದೇಶದ ಉದ್ದದ ಸುರಂಗ ಮಾರ್ಗ ಉದ್ಘಾಟನೆ |News Mirchi

ಇಂದು ದೇಶದ ಉದ್ದದ ಸುರಂಗ ಮಾರ್ಗ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಿರ್ಮಿಸಿರುವ 2500 ಕೋಟಿ ವೆಚ್ಚದ ದೇಶದ ಅತಿ ಉದ್ದದ ರಸ್ತೆ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ಉಧಂಪುರ ಜಿಲ್ಲೆಯ ಬಟ್ಟಲ್ ಬಲಿಯಾನ್ ಎಂಬಲ್ಲಿ ರ‌್ಯಾಲಿಯಲ್ಲಿ ಭಾಷಣ ಮಾಡಲಿದ್ದಾರೆ.

9.2 ಕಿಮೀ ಉದ್ದದ ಚೆನಾನಿ – ನಾಶ್ರೀ ರಸ್ತೆ ಸುರಂಗ ಮಾರ್ಗ ಜಮ್ಮು ಮತ್ತು ಶ್ರೀನಗರಕ್ಕೆ ಸಂಪರ್ಕ ಕಲ್ಪಿಸಲಿದ್ದು, ಎರಡು ನಗರಗಳ ನಡುವಿನ ಪ್ರಯಾಣ ಸಮಯವನ್ನು ಎರಡು ಗಂಟೆಗಳಷ್ಟು ಕಡಿಮೆ ಮಾಡಲಿದೆ.

ಈ ಸುರಂಗ ಮಾರ್ಗ ಸುರಕ್ಷಿತ ಕಾರ್ಯಚರಣೆ ಮತ್ತು ನಿರ್ವಹಣೆಗೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ವಚ್ಛ ಗಾಳಿ ಬೆಳಕು ಹಾದುಹೋಗುವಂತೆ ನಿರ್ಮಿಸಲಾಗಿದ್ದು, ಉತ್ತಮ ಗುಣಮಟ್ಟದ ಸಂವಹನ ನಡೆಸಲು ಅನುಕೂಲವಾಗುವಂತೆ, ಅಫಘಾತ ಪತ್ತೆ ಹಚ್ಚುವುದು, ಆಟೋಮ್ಯಾಟಿಕ್ ಬೆಂಕಿ ನಂದಿಸುವಿಕೆ ಮುಂತಾದವ ಸೌಲಭ್ಯಗಳನ್ನು ಈ ಸುರಂಗ ಮಾರ್ಗ ಹೊಂದಿದೆ.

Loading...
loading...
error: Content is protected !!