ಶಶಿಕಲಾ, ಪನ್ನೀರ್ ಸೆಲ್ವಂ ರವರಿಗೆ ಪ್ರಧಾನಿ ಸಾಂತ್ವನ

ಪ್ರಧಾನಮಂತ್ರಿ ನರೇಂದ್ರ ಮೋದಿ ಜಯಲಲಿತಾ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಇಂದು ಬೆಳಗ್ಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ಅವರು, ವಿಮಾನ ನಿಲ್ದಾಣದಿಂದ ಜಯಲಲಿತಾ ಪಾರ್ಥೀವ ಶರೀರ ಇಟ್ಟಿದ್ದ ರಾಜಾಜಿ ಹಾಲ್ ಗೆ ಆಗಮಿಸಿದರು. ಜಯಾ ಪಾರ್ಥೀವ ಶರೀರರದ ಬಳಿ ಪುಷ್ಪ ಗುಚ್ಛ ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಯಲಲಿತ ಗೆಳತಿ ಶಶಿಕಲಾ ರವರನ್ನು ಮೋದಿ ಮಾತನಾಡಿದರು. ಈ ವೇಳೆ ಕಣ್ಣೀರಾದ ಶಶಿಕಲಾ ಮತ್ತು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಸಾಂತ್ವನ ಹೇಳಿದರು. ಪನ್ನೀರ್ ಸೆಲ್ವಂ ಬೆನ್ನು ತಟ್ಟಿ ಈ ಸಂದರ್ಭದಲ್ಲಿ ಧೈರ್ಯವಾಗಿರುವಂತೆ ಹೇಳಿದರು.

ಜಯಲಲಿತಾ ರವರ ಅಂತಿಮ ದರ್ಶನಕ್ಕೆ ಅಗಮಿಸಿದ ಜನರಿಗೆ ಮೋದಿ ನಮಸ್ಕರಿಸಿದರು. ಪ್ರಧಾನಿಯವರ ಜೊತೆ ತಮಿಳುನಾಡು ಗವರ್ನರ್ ವಿದ್ಯಾಸಾಗರ ರಾವ್, ವೆಂಕಯ್ಯನಾಯ್ಡು ಇದ್ದರು. ಇಂದು ಸಂಜೆ ಮರೀನಾ ಬೀಚ್ ನಲ್ಲಿ ಗುರುಗಳಾದ ಎಂ.ಜಿ.ಆರ್ ಅವರ ಸಮಾಧಿ ಪಕ್ಕ ಜಯಾ ಅಂತ್ಯಕ್ರಿಯೆ ನಡೆಯಲಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೆಂದ್ರ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ, ಚಿತ್ರರಂಗದ ಪ್ರಮುಖರು ಜಯಲಲಿತಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Related News

Comments (wait until it loads)
Loading...
class="clear">