ಬ್ಯಾಂಕಿಗೆ ಬಂದ ಪ್ರಧಾನಿ ಮೋದಿಯವರ ತಾಯಿ

ಗಾಂಧಿನಗರ(ಗುಜರಾತ್): ದೇಶಾದ್ಯಂತ ಹಳೆಯ 500, 1000 ಮುಖಬೆಲೆಯ ನೋಟು ರದ್ದುಗೊಂಡಿದ್ದರಿಂದ ವಯಸ್ಸಿನ ಮಿತಿಯಿಲ್ಲದೆ ಪ್ರತಿಯೊಬ್ಬರೂ ಬ್ಯಾಂಕು, ಅಂಚೆ ಕಛೇರಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಗುಜರಾತಿನ ಬ್ಯಾಂಕೊಂದರ ಎದುರು ವೃದ್ಧೆಯೊಬ್ಬರು ಮಾತ್ರ ಎಲ್ಲರ ಗಮನ ಸೆಳೆದರು. ಮಾಧ್ಯಮಗಳ ಕ್ಯಾಮೆರಾ ಕಣ್ಣು ಕೂಡಾ ಅತ್ತಲೇ ತಿರುಗಿದವು.

ಆಕೆ ಬೇರೆ ಯಾರೂ ಅಲ್ಲ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್. ಆಕೆ ಮಂಗಳವಾರ ಬೆಳಗ್ಗೆ ಗುಜರಾತಿನ ಗಾಂಧಿನಗರದ ಬ್ಯಾಂಕ್ ಬಳಿ ತಲುಪಿದರು. ಬ್ಯಾಂಕ್ ಬಳಿ ವೃದ್ಧರಿಗಾಗಿ ಮೀಸಲಿರಿಸಲಾಗಿದ್ದ ಕೌಂಟರ್ ಬಳಿ ತೆರಳಿ ತಮ್ಮ ಹಳೆಯ ನೋಟು ಬದಲಿಸಿಕೊಂಡರು.